March 10, 2025

ರೈತರಿಗೆ ಸಬ್ಸಿಡಿಯಲ್ಲಿ 30 ಸ್ಪ್ರಿಂಕ್ಲರ್ ಪೈಪ್|Sprinkler set subsidy

ಆತ್ಮೀಯ ರೈತ ಬಾಂಧವರೇ ಪ್ರತಿಯೊಬ್ಬರಿಗೂ ಕೂಡ ಸರ್ಕಾರದ ಇಲಾಖೆ ಸಬ್ಸಿಡಿ ಪಡೆದುಕೊಳ್ಳಬೇಕು ಕನಿಷ್ಠ ಪಕ್ಷ ನೇರವಾಗಿ ಏನೇ ಖರೀದಿ ಮಾಡಬೇಕಾದರೂ ಸಾಕಷ್ಟು ಹಣ ಖರ್ಚಾಗುತ್ತದೆ ಆದರೆ ಕಡಿಮೆ ಹಣ ಖರ್ಚು ಮಾಡಿ ಏನಾದರೂ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ರೈತರ ಮನದಲ್ಲಿ ಇದ್ದೇ ಇರುತ್ತದೆ ಆದರೆ ರೈತರ ಬಗ್ಗೆ ನಾವು ಹೇಳುವುದಾದರೆ ರೈತರು ಬಹಳಷ್ಟು ಸಮಯದಲ್ಲಿ ಇಲಾಖೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದಿಲ್ಲ ಹೀಗಾಗಿ ಎಷ್ಟೋ ಯೋಜನೆಗಳು ಆತನಿಗೆ ಗೊತ್ತಾಗದೆನೆ ಸಮಯ ಮುಗಿದು ಹೋಗುತ್ತವೆ.

ರೈತ ಸಂಪರ್ಕ ಕೇಂದ್ರಗಳಿಂದ ವಿವಿಧ ಪರಿಕರಗಳಿಗೆ ಅರ್ಜಿ!

ಕೃಷಿಯಂತ್ರೀ ಕರಣ ಎನ್ನುವ ಯೋಜನೆಯಲ್ಲಿ ವಿವಿಧ ಯಂತ್ರೋಪಕರಣಗಳನ್ನು ವಿಸ್ತರಿಸಲಾಗುತ್ತಿದೆ. ಈ ಯಂತ್ರೋಪಕರಣಗಳು ನಿ ಮಗೆ ತುಂಬಾ ಸಹಾಯವಾಗುತ್ತದೆ ಇದರಿಂದ ನೀವು ನಿಮ್ಮ ಆರ್ಥಿಕ ಅಭಿವೃದ್ಧಿಯನ್ನು ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ವಾರ್ಷಿಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಪವರ್ ಸ್ಪೇಯರ್, ಬ್ರಶ್ ಕಟ್ಟ‌ರ್, ಪವ‌ರ್ ವೀಡರ್‌, ಮೋಟೋಕಾರ್ಟ್, ಪವ‌ರ್ ಟಿಲ್ಲರ್‌ನ್ನು ವಿತರಿಸಲಾಗುತ್ತಿದ್ದು ಸಾಮಾನ್ಯ ವರ್ಗದವರಿಗೆ ಗರಿಷ್ಟ ಸಹಾಯಧನ ಎಲ್‌ಐಯಂತೆ ಶೇ.50 ಹಾಗೂ ಪ.ಜಾತಿ ಮತ್ತು ಪಂಗಡದವರಿಗೆ ಶೇ.90ರ ಸಹಾಯಧನದಲ್ಲಿ ವಿತರಿಸಲಾಗುವುದು.

ರೈತರೆ ನಿಮಗೇನಾದರೂ ನೀರಿನ ಸಮಸ್ಯೆ ಇದೆಯೇ?

ಯಂತ್ರೋಪಕರಣಗಳಲ್ಲದೆ ರೈತರೆ ನಿಮಗೆ ತುಂತುರು ನೀರಾವರಿಗೆ ಬೇಕಾಗುವ ಸ್ಪ್ರಿಂಕ್ಲರ್ ಸೆಟ್ ಅನ್ನು ಸಹಾಯಧನದಲ್ಲಿ ವಿತರಿಸುತ್ತಿದ್ದಾರೆ. ಇದರಿಂದ ನೀವು ಕಡಿಮೆ ನೀರನ್ನು ಉಪಯೋಗಿಸಿಕೊಂಡು ಹೆಚ್ಚಿನ ಬೆಳೆಯನ್ನು ತೆಗೆದುಕೊಳ್ಳಬಹುದು ಇದರ ಜೊತೆಗೆ ನಿಮ್ಮ ಆದಾಯವು ಹೆಚ್ಚಾಗುತ್ತದೆ.

ತುಂತುರು ನೀರಾವರಿ ಘಟಕ ಯೋಜನೆಯಲ್ಲಿ 5 ಸ್ಪಿಂಕ್ಲರ್ ಸೆಟ್ ಹಾಗೂ 30 ಕಪ್ಪು ಪೈಪುಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನದಲ್ಲಿ ವಿತರಿಸಲಾಗುವುದು. ಪ್ರತಿ ಹೆಕ್ಟೇರ್‌ಗೆ ಗರೀಷ್ಠ 35 ಪಿವಿಸಿ ಪೈಪ್‌ಗಳನ್ನು ಎಲ್ಲಾ ವರ್ಗದವರಿಗೂ ಶೇ.50ರ ಸಹಾಯಧನದಲ್ಲಿ ವಿತರಿಸಲಾಗುವುದು.

ಈ ಎರಡು ಯೋಜನೆಗಳನ್ನು ನೀವು ಪಡೆದುಕೊಳ್ಳಬೇಕದರೆ ಬೇಕಾಗುವ ದಾಖಲೆಗಳು?


ಈ ಎಲ್ಲಾ ದಾಖಲಾತಿಗಳನ್ನು ನೀವು ಹೊಂದಿದ್ದರೆ ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯ ಇಲ್ಲದಿದ್ದರೆ ಈಗಲೇ ಎಲ್ಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ. ದಾಖಲಾತಿಯಲ್ಲಿ ಏನಾದರೂ ತೊಂದರೆ ಇದ್ದರೆ ಈಗಲೇ ಸರಿಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ ಫಲಾನಿಭವಿಗಳು ತಮ್ಮ ಜಾಗದ ಪಹಣಿ, ಪಾಸ್ ಪೋರ್ಟ್ ಸೈಜ್ ಫೋಟೊ, ಬ್ಯಾಂಕ್‌ ಪಾಸ್ ಪುಸ್ತಕ ಮತ್ತು ಆಧಾ‌ರ್ ನಕಲು ಪ್ರತಿ, ಪ.ಜಾತಿ, ಪ.ಪಂಗಡದವರು ಜಾತಿ ಪ್ರಮಾಣ ಪತ್ರಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸುವಂತೆ ಸಹಾಯಕಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಟ್ರ್ಯಾಕ್ಟರ್ ಆಧಾರಿತ ಬೋರ್ವೆಲ್ ಮಷೀನ್ ನೀವು ನೋಡಿದ್ದೀರಾ?
https://krishimaratavahini.com/tractor-mounted-borewell-drilling-machine/

ಕೃಷಿ ಮಾರಾಟ ವಾಹಿನಿ

View all posts by ಕೃಷಿ ಮಾರಾಟ ವಾಹಿನಿ →

Leave a Reply

Your email address will not be published. Required fields are marked *