ಆತ್ಮೀಯ ರೈತ ಬಾಂಧವರೇ ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ರೈತರಿಂದ ಅರ್ಜಿ ಆವನಿಸಲಾಗಿದೆ ರೈತರು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ನಿಗದಿತ ಸಮಯದೊಳಗೆ ಸಲ್ಲಿಸಿದರೆ ನಿಮ್ಮ ಅರ್ಜಿಯನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ನೀವು ಸಲ್ಲಿಸಿರುವ ವಸ್ತುಗಳು ಅಂದರೆ ನಿಮಗೆ ಬೇಕಾಗುವ ಸಹಾಯಧನಗಳು ನಿಮಗೆ ದೊರೆಯುತ್ತವೆ.
ಸ್ಪ್ರೇಯರ್(Sprayer)ಪಂಪ್ ನೀಡಲು ಅರ್ಜಿ ಆಹ್ವಾನ!
ರೈತರ ಸಬ್ಸಿಡಿಯಲ್ಲಿ ಪ್ರೇಯರ್ ಪಂಪ್ ನೀವು ತೆಗೆದುಕೊಳ್ಳಬಹುದು ನೀವು ಪರಿಷ್ಠಿತ ಜಾತಿ ಅಥವಾ ಸಾಮಾನ್ಯ ವರ್ಗದ ರೈತರಾಗಿದ್ದರು ಕೂಡ ಈ ಯೋಜನೆ ಲಾಭವನ್ನು ಪಡೆಯಬಹುದು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ನೀವು ಮೊಟ್ಟಮೊದಲಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಎಣ್ಣೆ ಸಿಂಪರಣೆಗಾಗಿ ಸ್ಪ್ರೇಯರ್(Sprayer) ಪಂಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಆತ್ಮೀಯ ರೈತರೇ ಈಗಾಗಲೇ ಎರಡನೇ ಅಂದರೆ ಹಿಂಗಾರು ಹಂಗಾಮು ಮುಗಿಯುತ್ತಾ ಬರುತ್ತಿದೆ ಮತ್ತು ಬೆಳೆಗಳು ಕಾಳು ತುಂಬುವ ಹಂತದಲ್ಲಿದ್ದು ಎಣ್ಣೆ ಸಿಂಪರಣೆಗಳು ಬಹು ಜೋರಾಗಿ ನಡೆಯುತ್ತಿವೆ ಹೀಗಾಗಿ ಈ ಸಮಯದಲ್ಲಿ ಇಲಾಖೆಯಿಂದ ನಿಮಗೆ ಎಣ್ಣೆ ಸಿಂಪರಣೆ ಮಾಡಲು ಪೆಟ್ರೋಲ್ ಸ್ಪ್ರೇಯರ್ ಪಂಪ್ ಅಥವಾ ಚಾರ್ಜರ್ ಪಂಪ್ ಅಥವಾ ಎಚ್‌ಟಿಪಿ ಇವುಗಳಿಗೆ ಅರ್ಜಿಯನ್ನು ನೀಡಲು ರೈತ ಸಂಪರ್ಕ ಕೇಂದ್ರ ಇಲಾಖೆಯಿಂದ ಮಾಹಿತಿ ನೀಡಿದೆ.
(Sprayer)ಅರ್ಜಿ ನಮೂನೆ ಪಡೆಯುವುದು ಹೇಗೆ?
ಅರ್ಜುನ್ ನಮೂನೆಯನ್ನು ಈಗಾಗಲೇ ಕೆಲವೊಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಾರಂಭವಾಗಿದ್ದು ಅರ್ಜಿಯನ್ನು ಬೇಗನೆ ಸಲ್ಲಿಸಬೇಕು ಏಕೆಂದರೆ ಅರ್ಜಿ ಸ್ವಲ್ಪ ಮಾತ್ರ ಇರುತ್ತವೆ ಹೀಗಾಗಿ ಬಂದಿರುವ ಕೃಷಿ ಯಂತ್ರೋಪಕರಣಗಳನ್ನು ಮೊದಲು ಅರ್ಜಿ ಸಲ್ಲಿಸಿದವರಿಗೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
ಆಧಾರ್ ಕಾರ್ಡ್
ಭಾವಚಿತ್ರಗಳು
ಖಾತೆ ಉತಾರಿ
ಪಹಣಿ ಪತ್ರ
20 ರೂಗಳ ಬಾಂಡ್ ( ಪ್ರಥಮ ಪಾರ್ಟಿ- ರೈತನ ಹೆಸರು ಮತ್ತು
ದ್ವಿತೀಯ ಪಾರ್ಟಿ- ನಿಮ್ಮ ರೈತ ಸಂಪರ್ಕ ಕೇಂದ್ರದ ಹೆಸರು)
ಅರ್ಜಿ ನಮೂನೆ , ಇದನ್ನು ಅಲ್ಲೇ ಇಲಾಖೆಯಲ್ಲಿ ನೀಡಲಾಗುತ್ತದೆ, ಅರ್ಜಿಯನ್ನು ಸರಿಯಾಗಿ ತುಂಬಿ ನಂತರ ನೀವು ಇಲಾಖೆಗೆ ಒಪ್ಪಿಸಿ ಬರಬೇಕಾಗುತ್ತದೆ ಅದಾದ ನಂತರ, ಡಿಡಿಗಳ ಮೂಲಕ ನಿಮ್ಮ ಬ್ಯಾಂಕಿನಿಂದ ಕೃಷಿ ಯಂತ್ರೋಪಕರಣಗಳ ಕಂಪನಿಗೆ ಆರ್‌ಟಿಜಿಎಸ್ ಮುಖಾಂತರ ಹಣವನ್ನು ಕಳುಹಿಸಬೇಕಾಗುತ್ತದೆ ಮತ್ತು ಯುಟಿಆರ್ ನಂಬರ್ ಪಡೆಯಬೇಕಾಗುತ್ತದೆ.
ನಿಮ್ಮ ಯೂಟಿಆರ್ ನಂಬರ್ ಬಂದ ನಂತರ ಮತ್ತೆ ಪುನಹ ಇಲಾಖೆಗೆ ಹೋಗಬೇಕು ಇಲಾಖೆಯವರು ಅದನ್ನು ಪರಿಶೀಲಿಸಿ ಮತ್ತು ನಿಮ್ಮ ವರ್ಕ್ ಆರ್ಡರ್ ಮಾಡಿಕೊಡುತ್ತಾರೆ ಅಂದರೆ ನೀವು ಅರ್ಜಿ ಹಾಕಿದ ಮೇಲೆ ವರ್ಕ್ ಆರ್ಡರ್ ಆಗುತ್ತದೆ, ನಂತರ ಅದನ್ನು ತಾಲೂಕು ಕೃಷಿ ನಿರ್ದೇಶಕರ ಕಚೇರಿಗೆ ಕಳಿಸಲಾಗುತ್ತದೆ ಮತ್ತು ಪರಿಶೀಲಿಸಿ ಅದನ್ನು ಅಪ್ರುವಲ್ ಮಾಡಲಾಗುತ್ತದೆ.
ಕೊನೆಯದಾಗಿ ಮತ್ತೆ ನಿಮ್ಮ ರೈತ ಸಂಪರ್ಕ ಕೇಂದ್ರಕ್ಕೆ ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಆರ್ಡರ್ ಕಾಪಿ ಕಳುಹಿಸುತ್ತಾರೆ ಈ ಆರ್ಡರ್ ಕಾಪಿಯನ್ನು ತೆಗೆದುಕೊಂಡು ನೀವು ನಿಮಗೆ ಸರಬರಾಜು ಮಾಡುವ ಅಂದರೆ ಯಾವ ಕಂಪನಿಯ ಯಂತ್ರೋಪಕರಣಗಳು ನಿಮಗೆ ಸರಬರಾಜು ಮಾಡಿದ್ದಾರೆ ಅಲ್ಲಿ ಹೋಗಿ ಇದನ್ನು ತೋರಿಸಿ ಮತ್ತು ಯಂತ್ರೋಪಕರಣಗಳನ್ನು ನೇರವಾಗಿ ಮನೆಗೆ ತೆಗೆದುಕೊಂಡು ಹೋಗಬಹುದು.
ಇದನ್ನು ಓದಿ:APMC Yaard Market Price List All Market Karnataka
https://krishimaratavahini.com/apmc-market-rate-list-29-01-2025/