ರೈತರ ಹಿಂಗಾರು ಬೆಳೆ ಸಮೀಕ್ಷೆ 2024-25 ಹೊಸ ಮೊಬೈಲ್ ಅಪ್ಲಿಕೇಶನ್ ಬಂದಿದೆ ಅಪ್ಲಿಕೇಶನ್ ಸಹಾಯದಿಂದ ನೀವು ನಿಮ್ಮ ಬಳಿ ಇರುವ ಮೊಬೈಲ್ ಬಳಕೆ ಮಾಡಿಕೊಂಡು ನಿಮ್ಮ ಪ್ರಸ್ತುತ ಹೀಂಗಾರು ಬೆಳೆಯನ್ನು ಸಮೀಕ್ಷೆ ಮಾಡಬೇಕು ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಮುಂಗಾರು ಮುಕ್ತಾಯವಾಗಿದೆ ಮತ್ತು ಹೀಂಗಾರು ಅರ್ಧದಷ್ಟು ಮುಗಿದಿದೆ.
ರೈತರ ಹಿಂಗಾರು ಬೆಳೆ ಸಮೀಕ್ಷೆ 2024-25?
1. ರೈತರು ಬೆಳೆ ಸಮೀಕ್ಷೆಯನ್ನು ಆನ್ಲೈನ ಮೂಲಕವೇ ಮಾಡಬೇಕು ನೀವು ರೈತರ ಸ್ವತಹ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ಬೆಳೆ ಸಮೀಕ್ಷೆಯನ್ನು ನೀವು ಆನ್ಲೈನ್ ನಲ್ಲಿಯೇ ಮಾಡಬಹುದು ಅದಲ್ಲದೆ ನಿಮ್ಮ ತಲಾಟಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಹ ನೀವು ಸೂಚನೆ ನೀಡುವ ಮೂಲಕ ನಿಮ್ಮ ಬೆಳೆಗಳ ಸಮೀಕ್ಷೆಯನ್ನು ಮಾಡಬಹುದು.
2. ಆದರೆ ಆ ರೈತರು ಸಾಕಷ್ಟು ತಮ್ಮ ತಮ್ಮ ಕಾರ್ಯಗಳಲ್ಲಿ ಬಿಜಿ ಇರುವುದರಿಂದ ಮತ್ತು ಇಲಾಖೆಯವರು ಕೂಡ ನಿಮ್ಮೊಂದಿಗೆ ಸರಿಯಾಗಿ ಸ್ಪಂದನೆ ಮಾಡದೆ ಇರುವ ಕಾರಣ ಅವರು ಬಂದಾಗ ನೀವು ನಿಮ್ಮ ಜಮೀನಿನ ಬಳಿ ಇರದೇ ಇರಬಹುದು ಹಾಗೂ ಇನ್ನಿತರಗಳು ತೊಂದರೆಗೆ ನೀವು ಇಡಬಹುದು ಅದಕ್ಕಾಗಿ ನಾವು ಸ್ವತಂತ್ರವಾಗಿ ನಿಮ್ಮ ಹತ್ತಿರ ಸ್ಕ್ರೀನ್ ಟಚ್ ಮೊಬೈಲ್ ಇದ್ದರೆ ಅದರ ಮೂಲಕವೇ ಸರ್ವೇ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
3. ನಾನು ನಿನ್ನೆ ಹಿಂಗಾರು ಬೆಳೆ ಸಮೀಕ್ಷೆ ಯಾಪ್ ಬಿಡುಗಡೆ ಆಗಿದೆ ಬೆಳಗ್ಗೆ ನಾನು ಅದನ್ನು ಇನ್ಸ್ಟಾಲ್ ಮಾಡಿಕೊಂಡು ನಮ್ಮ ಜಮೀನಿನ ಸರ್ವೆಯನ್ನು ನಾನು ಜಿಪಿಎಸ್ ಸರ್ವೆಯನ್ನು ಮೊಬೈಲ್ ನಲ್ಲಿಯೇ ಮಾಡಿದ್ದೆ , ಅವಾಗ ನನಗೆ ಗೊತ್ತಾಯ್ತು ರೈತರು ಕೂಡ ಸ್ವತಂತ್ರವಾಗಿ ಸ್ವಂತ ಮೊಬೈಲ್ ನಲ್ಲಿ ಜಿಪಿಎಸ್ ಸರ್ವೆಯನ್ನು ಮಾಡಬಹುದು.
4. ಹಿಂಗಾರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಆನ್ಲೈನ್ ಪ್ಲೇ ಸ್ಟೋರಲ್ಲಿ ಇರುತ್ತದೆ gps ಯಾವ ರೀತಿ ಮಾಡಬೇಕು ಅದನ್ನು ಸಂಪೂರ್ಣವಾಗಿ ನಾವು ನಿಮಗೆ ವಿಧಾನಗಳ ಮೂಲಕ ತೋರಿಸುತ್ತಾ ಹೋಗುತ್ತೇವೆ ನೀವು ಅದನ್ನೇ ಅನುಸರಿಸಿ ನೀವು ನಿಮ್ಮ ಜಿಪಿಎಸ್ ಮಾಡಬಹುದು.
Bele samikshe App 2024-25?
ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಪ್ಲೇ ಸ್ಟೋರ್ ನಲ್ಲಿ ಲಿಂಕ್ ದೊರೆಯುತ್ತದೆ ನಿಮಗೆ ಅರ್ಲಿ ಮೂರರಿಂದ ನಾಲ್ಕು ಮೊಬೈಲ್ ಅಪ್ಲಿಕೇಶನ್ಗಳು ಓಪನ್ ಆಗುತ್ತದೆ ಅದರಲ್ಲಿ ನೀವು ಹಿಂಗಾರು ಬೆಳೆ ಸಮೀಕ್ಷೆ 2024 2025 ಮಾಡಿಕೊಳ್ಳಬೇಕು ಒಂದು ವೇಳೆ ನಿಮಗೆ ಯಾವುದು ಆಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು ಎಂಬುದು ಗೊತ್ತಾಗದೆ ಇದ್ದಲ್ಲಿ ನಾವಿಲ್ಲಿ ಕೆಳಗಡೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ನೀವು ಹೊಸ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಬಹುದು.
https://play.google.com/store/apps/details?id=com.csk.farmer23_24.cropsurvey
ಇಲ್ಲಿ ಮೇಲೆ ನೀಡಿರುವ ಲಿಂಕ್ ಪ್ಲೇ ಸ್ಟೋರ್ ಲಿಂಕ್ ಆಗಿರುತ್ತದೆ ಇದು ರೈತರ ಹಿಂಗಾರು ಬೆಳೆ ಸಮೀಕ್ಷೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಆಗಿರುತ್ತದೆ ಇದು ಸರ್ಕಾರದ ಮತ್ತು ರೈತ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಆಗಿದ್ದು ಇದನ್ನು ಇನ್ಸ್ಟಾಲ್ ಮಾಡಿಕೊಂಡರೆ ಯಾವುದೇ ರೀತಿ ತೊಂದರೆ ಇರುವುದಿಲ್ಲ ಹೀಗಾಗಿ ರೈತರು ಹೆದರಿಕೆ ಕೊಳ್ಳದೆ ಸುಲಭವಾಗಿ ನೀವು ಈ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕು.
ಹಂತ 1: Bele Samikshe Login ಈಗ ನಿಮ್ಮ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡಿದ್ದೀರಿ ಮತ್ತು ಅದರಲ್ಲಿ ನೀವು ಅಗತ್ಯವಾದ ದಾಖಲೆಗಳನ್ನು ಅಥವಾ ದಾಖಲೆಗಳ ಸಹಾಯದಿಂದ ಲಾಗಿನ್ ಮಾಡಬೇಕಾಗುತ್ತದೆ.
ಹಂತ 2:Crop Survey app 2024-25 ಇದರಲ್ಲಿ ನೀವು ಇನ್ಸ್ಟಾಲ್ ಮಾಡಿಕೊಂಡ ನಂತರ ಮುಂದುವರೆಸಿ ಅಥವಾ ಸಕ್ರಿಯಗೊಳಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಕ್ಲಿಕ್ ಮಾಡಿದ ನಂತರ ನಿಮಗೆ ಆಧಾರ ಸಂಖ್ಯೆ ಕೇಳುತ್ತದೆ ಆಧಾರ ಸಂಖ್ಯೆ ಮೂಲಕ ನೀವು ಓಟಿಪಿಯನ್ನು ಪಡೆಯಬಹುದು ಅಥವಾ ಬೆರಳಚ್ಚು ಮೂಲಕ ಲಾಗಿನ್ ಮಾಡಬಹುದು ಅಥವಾ ನಿಮ್ಮ ಭಾವಚಿತ್ರವನ್ನು ಸೆರೆಹಿಡಿಯುವ ಮೂಲಕ ನೀವು ಈ ಅಪ್ಲಿಕೇಶನ್ ಲಾಗಿನ್ ಆಗಬಹುದು.
ಹಂತ 3: Crop Surevy online ಈಗ ಅಪ್ಲಿಕೇಶನ್ ಲಾಗಿನ್ ಆಗಿರುತ್ತದೆ ಲಾಗಿನ್ ಆಗಿರುವ ಅಪ್ಲಿಕೇಶನ್ ನನ್ನು ನೀವು ಸರ್ವೇ ನಂಬರ್ ತೋರಿಸುತ್ತದೆ ಮತ್ತು ನಿಮ್ಮ ಎಫ್ ಐ ಡಿ ತೋರಿಸುತ್ತದೆ ಅಂದರೆ ಯಾವ ರೈತರ ಹೆಸರಿನಲ್ಲಿ ಎಫ್ಐಡಿ ಹೊಂದಿರುತ್ತದೆಯೋ ಆ ರೈತರು ಮಾತ್ರ ಇದನ್ನು ಲಾಗಿನ್ ಆಗಬಹುದು ಬೇರೆಯವರಿಗೆ ಲಾಗಿನ್ ಆಗಲು ಬರುವುದಿಲ್ಲ.
ಹಂತ 4: ಈಗ ನೀವು ಲಾಗಿನ್ ಆಗಿದ್ದೀರಿ ಮತ್ತು ಈಗ ಸರ್ವೇ ಮಾಡಲು ಅಥವಾ ನಿಮ್ಮ ಬೆಳೆ ಸಮೀಕ್ಷೆ ಮಾಡಲು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು ಕೆಳಗಡೆ ಬಾಕ್ಸ್ ರೀತಿಯಲ್ಲಿ ಕಾಣುತ್ತಿರುತ್ತದೆ ಅದರಲ್ಲಿ ನಿಮ್ಮ ಹೆಸರು ಅದಕ್ಕೂ ಮೊದಲು ಸರ್ವೆ ನಂಬರ್ ಕಾಣಿಸುತ್ತದೆ ಆ ಕಾಣಿಸುತ್ತಿರುವ ಸರ್ವೇ ನಂಬರ್ ಮೇಲೆ ನೀವು ಕ್ಲಿಕ್ ಮಾಡಬೇಕು.
ಹಂತ 5: ಈಗ ನೀವು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದ ನಂತರ ಕೆಳಗಡೆ ಬೆಳೆ ವಿವರಗಳನ್ನು ದಾಖಲಿಸಿ ಎಂಬ ಆಯ್ಕೆ ಕಾಣಿಸುತ್ತದೆ ಮತ್ತು ಆಯ್ಕೆಗಳನ್ನು ನೋಡಿಕೊಂಡು ನೀವು, ನಿಮ್ಮ ಜಮೀನಿನಲ್ಲಿರುವ ಬೆಳೆಗಳನ್ನು ದಾಖಲಿಸುತ್ತಾ ಹೋಗಬೇಕಾಗುತ್ತದೆ.
a) ಮೊದಲಿಗೆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು ಇಂಗ್ಲಿಷ್ ನಲ್ಲಿಯೇ ಆಯ್ಕೆ ಮಾಡಿಕೊಳ್ಳಬೇಕು.
b) ಬೆಳೆ ಮುಖ್ಯ ಬೆಳೆಯೋ ಅಥವಾ ಶುದ್ಧ ಬೆಳೆ ಅಥವಾ ಮಿಶ್ರ ಬೆಳೆ ವಾರ್ಷಿಕ ಬೆಳೆ ಆಯ್ಕೆಮಾಡಿಕೊಳ್ಳಿ.
c) ಬೆಳೆ ವಿಸ್ತರಣವನ್ನು ದಾಖಲಿಸಿ ಮತ್ತು ಬೆಳೆಯ ಮುಖ್ಯ ನೀರಿನ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಿ ಮಳೆಯಾಶ್ರಿತ ಅಥವಾ ಕೊಳವೆಬಾವಿ ಇನ್ನಿತರ ಆಯ್ಕೆಗಳು ನಿಮಗೆ ಸಂಬಂಧಪಟ್ಟ ಇರುವುದನ್ನು ಆಯ್ಕೆ ಮಾಡಿಕೊಳ್ಳಿ.
d) ನಂತರ ಮೂರು ಛಾಯಾಚಿತ್ರಗಳನ್ನು ನೀವು ಸೆರೆ ಹಿಡಿಯಬೇಕಾಗುತ್ತದೆ ಮೂರು ಛಾಯಾಚಿತ್ರಗಳು ಅಥವಾ ಭಾವಚಿತ್ರಗಳನ್ನು ತೆಗೆಯಬೇಕಾಗಿದ್ದಲ್ಲಿ ಆ ಸರ್ವೇ ನಂಬರ್ ಇನ 30 ಮೀಟರ್ ಒಳಗಡೆ ನೀವು ಇರಬೇಕಾಗುತ್ತದೆ ಅದು ನಿಮ್ಮ ಜಿಪಿಎಸ್ ಆನ್ಲೈನ್ ಟ್ರ್ಯಾಕಿಂಗ್ ತನ್ನಿಂದ ತಾನೇ ಆಗುತ್ತಿರುತ್ತದೆ ಒಂದು ವೇಳೆ ಅಲ್ಲಿ ಏನಾದರೂ ಬಂದರೆ ನೀವು ನಿಮ್ಮ ಜಮೀನಿನ ಮಧ್ಯಭಾಗದಲ್ಲಿ ಹೋಗಬೇಕು.
e) ಬೆಳೆ ವಿವರವನ್ನು ದಾಖಲಿಸಿದ ಮೇಲೆ ಅದನ್ನು ವಿವರವನ್ನು ಉಳಿಸಿ ಅಥವಾ ಸೇವ್ ಮಾಡಿ ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಬೇಕು ಈಗ ನಿಮ್ಮ ಬೆಳೆ ದಾಖಲೆ ಆಗುತ್ತದೆ.
ಹಂತ 6: ಬೆಳೆ ಸಮೀಕ್ಷೆ ಮಾಡುವಾಗ ಮುಖ್ಯ ಮಾಹಿತಿ ಏನೆಂದರೆ ನೀವು ನಿಮ್ಮ ಒಟ್ಟು ವಿಸ್ತೀರ್ಣವನ್ನು ದಾಖಲಿಸಬೇಕಾಗುತ್ತದೆ ಉದಾಹರಣೆಗೆ ನಿಮ್ಮ ಹೆಸರಿನಲ್ಲಿ ಮೂರು ಎಕರೆ ಜಮೀನಿದ್ದರೆ ನೀವು ಎಷ್ಟಾದರೂ ಬೆಳೆಗಳನ್ನು ಆಯ್ಕೆ ಮಾಡಬಹುದು ಆದರೆ ಮೂರು ಎಕರೆ ಮುಗಿದ ನಂತರ ಹೆಚ್ಚಿಗೆ ಬೆಳೆ ಆಯ್ಕೆ ಮಾಡಲು ಬರುವುದಿಲ್ಲ ಉದಾಹರಣೆಗೆ ವಾರ್ಷಿಕ ಬೆಳೆಗಳಾದರೆ ಒಂದು ಎಕರೆಗೆ ಎಷ್ಟು ಗಿಡಗಳಿವೆ ಮತ್ತು ಅವುಗಳ ಅಂತರ ಎಷ್ಟು ಅಲ್ಲಿ ತೋರಿಸುತ್ತದೆ ಅದಕ್ಕಿಂತ ಹೆಚ್ಚಿಗೆ ಆಗಬಾರದು.
ಹಂತ 7: ಒಟ್ಟು ವಿಸ್ತೀರ್ಣವನ್ನು ಎಂಟ್ರಿ ಮಾಡುವುದನ್ನು ತಪ್ಪಬಾರದು ಏಕೆಂದರೆ ಇದು ನಿಮ್ಮ ಬೆಳೆ ಮುಂದಿನ ವರ್ಷ ಪಹಣಿ ಪತ್ರದಲ್ಲಿ ಅಂದರೆ ನೀವು ಬೆಳೆ ಸಮೀಕ್ಷೆ ಮಾಡಿದಾಗ ನಿಮ್ಮ ಪಹಣಿ ಪತ್ರಗಳಲ್ಲಿ ಈ ಬೆಳೆಗಳು ನಮೂದನೆ ಆಗುತ್ತವೆ.
ಈ ರೀತಿಯಾಗಿ ನೀವು ಏಳು ಹಂತಗಳನ್ನು ಸರಿಯಾಗಿ ಪಾಲಿಸಿ, ಬೆಳೆ ಸಮೀಕ್ಷೆಯನ್ನು ಮಾಡಿದರೆ ಸ್ವತಂತ್ರವಾಗಿ ಯಾವುದೇ ರೀತಿ 50 ಸಹ ನೀಡದೇನೇ ನೀವು ಬೆಳೆ ಸಮೀಕ್ಷೆಯನ್ನು ಮೊಬೈಲ್ ನಲ್ಲಿಯೇ ಮಾಡಬಹುದು ಅದಕ್ಕಾದ ಹಲವಾರು ವಿಡಿಯೋಗಳನ್ನು ಯೂಟ್ಯೂಬ್ ಗಳಲ್ಲಿ ಸಹ ನೀವು ನೋಡಬಹುದು ಅಥವಾ ಹಂತ ಹಂತವಾಗಿ ನಾವು ಬರೆದಿರುವ ಲೇಖನವನ್ನು ನೋಡಿ ತಿಳಿದುಕೊಳ್ಳಬಹುದು.
ಬೆಳೆ ವಿಮೆ ರೈತರಿಗೆ ಮತ್ತು ಕೃಷಿ ಉದ್ಯಮಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಬೆಳೆ ವಿಮೆಯ ಕೆಲವು ಅನುಕೂಲಗಳನ್ನು ಪರಿಗಣಿಸೋಣ:
ಆರ್ಥಿಕ ರಕ್ಷಣೆ
1. ಅಪಾಯ ನಿರ್ವಹಣೆ: ನೈಸರ್ಗಿಕ ವಿಕೋಪಗಳು ಅಥವಾ ರೋಗಗಳು ಮತ್ತು ಕೀಟಗಳಿಂದ ಬೆಳೆ ನಷ್ಟ, ಹಾನಿ ಅಥವಾ ನಾಶವನ್ನು ಎದುರಿಸುವ ರೈತರಿಗೆ, ಇದು ಬೆಳೆ ವಿಮೆಯ ಮೂಲಕ ಅಪಾಯವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
2. ಆದಾಯ ಉತ್ಪಾದನೆ: ರೈತರು ಸ್ಥಿರವಾಗಿರುವುದನ್ನು ಖಾತ್ರಿಪಡಿಸುವ ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಬೆಳೆ ವಿಮೆಯು ಬೆಳೆ ಹಾನಿಯ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ.
ಪ್ರಯೋಜನಗಳು
1. ಹೂಡಿಕೆಯ ನಿರೀಕ್ಷೆಗಳು: ನಷ್ಟವನ್ನು ನಿರ್ವಹಿಸುವ ಅಥವಾ ತಡೆಯುವ ಸಾಮರ್ಥ್ಯದೊಂದಿಗೆ, ರೈತರು ಬೆಳೆ ವಿಮೆಯತ್ತ ಮುಖ ಮಾಡುತ್ತಾರೆ, ಇದು ಹೊಸ ಬಂಡವಾಳ ಹೂಡಿಕೆಗಳನ್ನು ಅನ್ವೇಷಿಸಲು ಮತ್ತು ಅವರ ಕೃಷಿ ತಂತ್ರಜ್ಞಾನ ಮತ್ತು ಅಭ್ಯಾಸಗಳನ್ನು ನವೀಕರಿಸಲು ಅನುವು ಮಾಡಿಕೊಡುತ್ತದೆ.
2. ಬೆಳವಣಿಗೆಯ ನಿರೀಕ್ಷೆಗಳು: ಬೆಳೆ ವಿಮೆಯ ಸಹಾಯದಿಂದ, ಕೃಷಿ ಉದ್ಯಮದ ವಿಸ್ತರಣೆ ಮತ್ತು ಅದರ ಪೋಷಣೆಯಲ್ಲಿ ಸಹಾಯ ಮಾಡುವ ಅಪಾಯಗಳನ್ನು ನಿಭಾಯಿಸಲಾಗುತ್ತದೆ.
ಸಾಮಾಜಿಕ ಪ್ರಯೋಜನಗಳು
1. ಆಹಾರ ಸುರಕ್ಷತೆಯ ಭರವಸೆ: ಆಹಾರದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ರೈತರು ತೀವ್ರ ಮತ್ತು ಕಷ್ಟಕರ ಪರಿಸ್ಥಿತಿಗಳಲ್ಲಿ ಬೆಳೆಗಳನ್ನು ಬೆಳೆಯುವಾಗ ಹಣಕಾಸಿನ ಬೆಂಬಲದ ಅಗತ್ಯವಿದೆ. ಈ ಸಮಯದಲ್ಲಿ, ಬೆಳೆ ವಿಮೆ ಅವರಿಗೆ ಸಹಾಯ ಮಾಡಲು ಮುಂದಾಗಿದೆ.
2. ಬಡತನ ನಿರ್ಮೂಲನೆ: ಬೆಳೆ ವಿಮೆಯು ರೈತರಿಗೆ ಪ್ರತಿಕೂಲವಾದ ಸಮಯದಲ್ಲಿ ಆರ್ಥಿಕ ಬೆಂಬಲವನ್ನು ಪಡೆಯಲು ಅನುವು ಮಾಡಿಕೊಡುತ್ತದೆ, ಇದು ಕೃಷಿ ಜಿಲ್ಲೆಗಳಲ್ಲಿ ಬಡತನವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಪರಿಸರ ಪ್ರಯೋಜನಗಳು
1. ಅಪಾಯ ಕಡಿತ ಕೃಷಿ: ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಹೆಚ್ಚು ಒಲವು ತೋರುತ್ತಾರೆ, ಇದು ಅಂತಿಮವಾಗಿ ಅಪಾಯಕಾರಿ ಅಭ್ಯಾಸಗಳನ್ನು ಕಡಿಮೆ ಮಾಡುವ ಪರಿಸರ ಸ್ನೇಹಿ ವಿಧಾನಗಳನ್ನು ಬಳಸಲು ಸಹಾಯ ಮಾಡುತ್ತದೆ.
2. ಹವಾಮಾನ ಬದಲಾವಣೆಯ ಹೊಂದಾಣಿಕೆ: ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಸಹಾಯ ಮಾಡಲು, ಅಂತಹ ಸನ್ನಿವೇಶದಿಂದ ಚೇತರಿಸಿಕೊಳ್ಳಲು ಅಗತ್ಯವಾದ ಹಣಕಾಸಿನ ನೆರವು ನೀಡುವ ಮೂಲಕ ಬೆಳೆ ವಿಮೆ ರೈತರಿಗೆ ಸಹಾಯ ಮಾಡುತ್ತದೆ.
#Bele Survey 2024-25 # ಮುಂಗಾರು ಬೆಳೆ ಸಮೀಕ್ಷೆ ಮೊಬೈಲ್ ಆಪ್ #ಹಿಂಗಾರು ಬೆಳೆ ಸರ್ವೆ ಮಾಡುವ ಮೊಬೈಲ್ ಆಪ್ #ಬೆಳೆ ಸರ್ವೇ ಡೀಟೇಲ್ಸ್ #Bele Samikshe #bele Survey Login