ಇನ್ಮುಂದೆ ವಾಟ್ಸಾಪ್‌ನಲ್ಲೇ ಗ್ರಾ.ಪಂ. ಸೇವೆಗಳು ಲಭ್ಯ ಬೆಂಗಳೂರು: ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ
ಮತ್ತಷ್ಟು ಸರಳಗೊಳಿಸಲಾಗಿದೆ. ಗ್ರಾಮೀಣ ಜನತೆ ತಮ್ಮೆಲ್ಲಾ ಅಹವಾಲುಗಳನ್ನು ದಾಖಲಿಸಲು ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಬಹುದು. ಅಥವಾ ಅದೇ ಸಂಖ್ಯೆಯಲ್ಲಿ ವಾಟ್ಸಾಪ್ ಚಾಟ್ ಮೂಲಕವೂ ಅಹವಾಲು ಸಲ್ಲಿಸಬಹುದು.
ಈವರೆಗೆ ಪಂಚಾಯ್ತಿ ಸಂಬಂಧಿಸಿದಂತೆ ಸೇವೆಗಳಿಗೆ ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಇನ್ಮುಂದೆ ವಾಟ್ಸ್ ಆಪ್ ನಲ್ಲಿ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.
ಯಾವ ರೀತಿ ಸಲ್ಲಿಸಬೇಕು?
ವಾಟ್ಸಾಪ್ ಮೂಲಕ 8277506000 ಸಂಖ್ಯೆಗೆ ಹಾಯ್ ಎಂದು ಕಳುಹಿಸಿ, ಜಿಲ್ಲೆಯ ಸಂಖ್ಯೆಯನ್ನು ನಮೂದಿಸಬೇಕು. ತಾಲೂಕಿನ ಸಂಖ್ಯೆಯನ್ನು ನಮೂದಿಸಬೇಕು. ಗ್ರಾಮ ಪಂಚಾಯತಿಯ ಸಂಖ್ಯೆಯನ್ನು ನಮೂದಿಸಿದ ನಂತರ ಗ್ರಾಮದ ಸಂಖ್ಯೆಯನ್ನು ನಮೂದಿಸಬೇಕು ಗ್ರಾಮವನ್ನು ಖಚಿತ ಪಡಿಸಲು ಹೌದು ಎಂದು ಸೆಲೆಕ್ಟ್ ಮಾಡಬೇಕು. ಇದಾದ ನಂತರ ನಿಮಗೆ ಬೇಕಿರುವ ಮಾಹಿತಿ/ಕುಂದುಕೊರತೆ/ಅಥವಾ ಸೇವೆಗಾಗಿ ಮುಂದುವರೆಸಬಹುದು ಎಂದು ತಿಳಿಸಲಾಗಿದೆ.
ಇದನ್ನು ಓದಿ:ಎಪಿಎಂಸಿ ಮಾರುಕಟ್ಟೆ ವರದಿ! ಕಳೆದ ವಾರ ಮತ್ತು ಇವತ್ತಿನವರೆಗೆ ಯಾವ ಕೃಷಿ ಉತ್ಪನ್ನಗಳ ಬೆಲೆಗಳು ಹೆಚ್ಚಿಗೆ ಆಗಿವೆ ಮತ್ತು ಕಡಿಮೆಯಾಗಿವೆ? ಲಿಸ್ಟ್
https://krishimaratavahini.com/market-rates-variation-from-23-to-30-january/
ಇದನ್ನು ಓದಿ:ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ಸಬ್ಸಿಡಿಯಲ್ಲಿ ಸ್ಪ್ರೇಯರ್ ಪಂಪ್, ಚಾರ್ಜರ್ ಪಂಪ್ ಬ್ಯಾಟರಿ ಪಂಪ್ ಮತ್ತು ಎಚ್ ಟಿ ಪಿ ಪಂಪ್
https://krishimaratavahini.com/agriculture-sprayer-pumps/