March 10, 2025

ಜಮೀನಿಗೆ ತಕರಾರು ಅರ್ಜಿ ಎಂದರೇನು ಹೇಗೆ ಸಲ್ಲಿಸಬೇಕು? Application for objection request

ಆತ್ಮೀಯ ರೈತರೇ ತಾವು ಜಮೀನಿಗೆ ಸಂಬಂಧಪಟ್ಟಂತೆ ತಕರಾರು ವರ್ಜಿಯನ್ನು ಸಲ್ಲಿಸುವ ಅವಕಾಶ ರಾಜ್ಯದ ಎಲ್ಲಾ ರೈತರಿಗೂ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶಾದ್ಯಂತ ಯಾರಾದರೂ ತಮ್ಮ ಜಮೀನಿಗೆ ತೊಂದರೆ ಆಗುತ್ತಿದ್ದರೆ ನೀವು ತಕರಾರು ಅರ್ಜಿಗಳನ್ನು ನೀಡಬಹುದು ತಕರಾರು ಅರ್ಜಿಯನ್ನು ನೀಡಲು ಸಂವಿಧಾನದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ತಕರಾರು ಅರ್ಜಿ ಎಂದರೇನು?

ರೈತರಿಗೆ ಸರ್ವೇ ಸಾಮಾನ್ಯವಾಗಿ ಬೇರೆಯವರೊಂದಿಗೆ ಕಲಹಗಳು ಇದ್ದೇ ಇರುತ್ತವೆ, ಆತನು ಯಾರೊಂದಿಗೂ ಸಹ ಸರಿಯಾಗಿ ಇರಲು ಜನರು ಬಿಡುವುದಿಲ್ಲ ಅದಕ್ಕಾಗಿ ನಾವು ತಿಳಿದುಕೊಳ್ಳಬೇಕಾದುದು ಏನೆಂದರೆ ರೈತನು ಚೆನ್ನಾಗಿ ಇದ್ದರೂ ಕೂಡ ಆತನಿಗೆ ಬೇರೆಯವರು ಕಾಲು ಎಳೆಯುವ ಕೆಲಸವನ್ನು ಮಾಡುತ್ತಿರುತ್ತಾರೆ ಹೀಗಾಗಿ ಆತನು ತಕರಾರು ಜಗಳ ಕಲಹ ಇನ್ನಿತರ ಚಟುವಟಿಕೆಗಳಿಗೆ ಈಡಾಗುತ್ತಿದ್ದಾನೆ ಹೀಗಾಗಿ ಆತನಿಗೆ ತಕರಾರು ಅರ್ಜಿ ನೀಡುವುದು ಕಡ್ಡಾಯವಾಗಿರುತ್ತದೆ.

ಈ ತಕರಾರು ಅರ್ಜಿ ಒಂದು ಅರ್ಜಿ ಆಗಿರುತ್ತದೆ ಮತ್ತು ನೀವು ನಿಮ್ಮ ಸಂಬಂಧ ಪಟ್ಟ ತೊಂದರೆಗಳಿಗೆ ನೀವು ಅರ್ಜಿಯಲ್ಲಿ ಬರೆದು ಅದನ್ನು ಕೋರ್ಟ್ ಗಳಿಗೆ ನೀಡುವ ಪತ್ರವನ್ನು ತಕರಾರು ಅರ್ಜಿ ಎಂದು ಕರೆಯುತ್ತೇವೆ ನೀವು ಸಾಕಷ್ಟು ರೀತಿಯಲ್ಲಿ ತಕರಾರು ಅರ್ಜಿಗಳನ್ನ ನೀಡಬಹುದು.

ತಕರಾರುವ ಅರ್ಜಿ ನೀಡುವುದು ಹೇಗೆ?

ನಾವು ಲೇಖನದಲ್ಲಿ ತಿಳಿಸಿರುವಂತೆ ರೈತರ ಬಗ್ಗೆ ಮಾತನಾಡುತ್ತಿರುವುದರಿಂದ ಅರೈತರು ಸರ್ವೇ ಸಾಮಾನ್ಯವಾಗಿ ತಕರಾರು ಅರ್ಜಿಯನ್ನು ತಮ್ಮ ಜಮೀನಿನ ಸಲುವಾಗಿ ನೀಡುತ್ತಿದ್ದಾರೆ ಉದಾಹರಣೆಗೆ ಅಣ್ಣ ಅಥವಾ ತಮ್ಮರು ತನಗೆ ಗೊತ್ತಿಲ್ಲದ ಹಾಗೆ ಅಥವಾ ಗೊತ್ತಿದ್ದರೂ ಆ ಜಮೀನವನ್ನು ಮಾರಾಟ ಮಾಡಲು ಇಚ್ಚಿರಿಸುತ್ತಾರೆ ಆದರೆ ಈತನು ಭೂಮಿಯನ್ನು ಮಾರಾಟ ಮಾಡಲು ಒಪ್ಪುವುದಿಲ್ಲ ಇಂತಹ ಸಮಯದಲ್ಲಿ ತಕರಾರು ಅರ್ಜಿಯನ್ನು ನೀಡುವ ಅವಕಾಶ ಆತನಿಗೆ ಇರುತ್ತದೆ ಇಂಥವುಗಳನ್ನು ನೀವು ಈಗಾಗಲೇ ಸಾಕಷ್ಟು ತೊಂದರೆಗಳನ್ನು ಕೇಳಿರುತ್ತೀರಿ.

ತಕರಾರು ಅರ್ಜಿಯನ್ನು ಬರೆಯುವ ವಿಧಾನ ತುಂಬಾ ಸುಲಭವಾಗಿರುತ್ತದೆ ಒಂದು ಪತ್ರವನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟ ಮೊದಲಿಗೆ ಹೆಸರು ಊರು ಮತ್ತು ತಕರಾರಿನ ವಿಷಯವನ್ನು ವಿವರಣೆ ಮಾಡಿ ಅದರ ಬಗ್ಗೆ ಕೆಳಗಡೆ ಇನ್ನಿಷ್ಟು ವಿವರವನ್ನು ನೀಡಿ ನಿಮ್ಮ ಸಹಿ ಅಥವಾ ನಿಮ್ಮೊಂದಿಗೆ ಇರುವ ಜನರ ಸಹಿಯನ್ನು ಮಾಡಿಕೊಂಡು ನೀವು ಅದನ್ನು ನಿಮ್ಮ ಕಂದಾಯ ಇಲಾಖೆಗೆ ಸಲ್ಲಿಸಬಹುದು ಇದನ್ನು ತಕರಾರು ಅರ್ಜಿ ಎಂದು ಕರೆಯುತ್ತಾರೆ.

ತಕರಾರ್ಜಿಯನ್ನು ಯಾವುದಕ್ಕೆಲ್ಲ ನೀಡಬಹುದು?

ತಕರಾರು ಅರ್ಜಿಯನ್ನು ನೀವು ಬಹಳಷ್ಟು ಕಾರ್ಯಗಳಿಗೆ ನೀಡಬಹುದು ಅಂದರೆ ನಿಮ್ಮ ವಿರುದ್ಧವಾಗಿ ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಏನೇ ಒಂದು ವಸ್ತುವನ್ನು ಮಾರಾಟ ಮಾಡುತ್ತಿದ್ದರೆ ಅದಕ್ಕೆ ತಕರಾರು ಅರ್ಜಿಯನ್ನು ನೀವು ಸಲ್ಲಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಸಾಮಾನ್ಯವಾಗಿ ನಿಮ್ಮ ಜಮೀನು ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಅಣ್ಣತಮ್ಮಂದಿರು ಮಾರುತ್ತಿದ್ದರೆ ಅವರಿಗೆ ನೀವು ತಕರಾರು ಅರ್ಜಿಯನ್ನು ನೀಡಬಹುದು ತಕರಾರು ಅರ್ಜಿ ನೀಡುವ ಮೂಲಕ ನಿಜವಾದ ಘಟನೆಯನ್ನು ನೀವು ಕಚೇರಿಗಳಲ್ಲಿ ಹೇಳಿಕೊಂಡಾಗ ಅದಕ್ಕೆ ಯಾದ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ತಕರಾರು ಅರ್ಜಿ ಒಂದು ರೂಪರೇಶವಾಗಿದ್ದು ಇದರಲ್ಲಿ ನಿಮ್ಮ ತೊಂದರೆಗಳನ್ನು ಅಂದರೆ ನಿಮ್ಮ ಜಮೀನಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ತೊಂದರೆಗಳನ್ನು ನೀವು ಕೇಳಲು ಅವಕಾಶವಿರುತ್ತದೆ ಹೀಗಾಗಿ ತಕರಾರು ಅರ್ಜಿ ಕೂಡ ಒಂದು ರೈತನಿಗೆ ಅತ್ಯಂತ ಪ್ರಮುಖವಾದ ಅರ್ಜಿ ನಮೂನೆಯಾಗಿದ್ದು ಇದರ ಬಗ್ಗೆ ನಿಮಗೆ ಗೊತ್ತಿರಲೇಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಈ ಅರ್ಜಿಗಳ ಸಲ್ಲಿಕೆ ತುಂಬಾ ಆಗುತ್ತಿದೆ ಅಂದರೆ ಜಗಳ ಕಲಹಗಳು ಹೆಚ್ಚಾಗುತ್ತಾ ಹೋಗುತ್ತಿದ್ದಾವೆ.

ತಕರಾರು ಅರ್ಜಿ ಬಗ್ಗೆ ಇನ್ನಷ್ಟು ವಿಶ್ಲೇಷಣೆ?

ಈ ಅರ್ಜಿ ಬಗ್ಗೆ ಶಾಲೆ ಕಲಿತವರು ಮತ್ತು ಕಲಿಯದವರು ಎಲ್ಲರಿಗೂ ಕೂಡ ಗೊತ್ತಿರುತ್ತದೆ ಶಾಲೆ ಕಲಿತವರಿಗೆ ನೀವು ಕೈಯಿಂದ ಈ ಅರ್ಜಿಯನ್ನು ಬರೆಯಬಹುದು ಅಥವಾ ಶಾಲೆ ಕಲಿತೇ ಇರದವರು ಸಹ ಬೇರೆಯವರ ಸಹಾಯವನ್ನು ಪಡೆದು ನಿಮಗೆ ಇರುವ ತೊಂದರೆಗಳನ್ನು ಹೇಳಿಕೊಂಡು ನೀವು ಈ ಅರ್ಜಿಯನ್ನು ಬರೆಯಬಹುದು ಮತ್ತು ಈ ಅರ್ಜಿ ಕೂಡ ನಿಮಗೆ ಸಮಯ ತೆಗೆದುಕೊಳ್ಳುತ್ತದೆ ಕಾಲಾವಕಾಶವಿಲ್ಲದೆ ಸರ್ಕಾರದಿಂದ ನೀವು ಯಾವುದೇ ರೀತಿಯ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ.

ಅರ್ಜಿಯನ್ನು ಸಲ್ಲಿಸಿದ ನಂತರ ಸುಮಾರು 21 ದಿನಗಳ ತನಕ ನೀವು ಯಾವುದೇ ರೀತಿಯ ಪದೇ ಪದೇ ಪ್ರಶ್ನೆ ಕೇಳುವ ರೀತಿ ಇರುವುದಿಲ್ಲ 21 ದಿನಗಳ ನಂತರ ತಾನಾಗಿಯೇ ನಿಮಗೆ ಕೋರ್ಟ್ ಅಥವಾ ನ್ಯಾಯಾಲಯ ಅಥವಾ ಕಂದ ಇಲಾಖೆಯವರು ಸಂಪರ್ಕಿಸುತ್ತಾರೆ ಮತ್ತು 21 ದಿನಗಳಾದ ನಂತರ ನೀವು ಅದರ ಬಗ್ಗೆ ವಿಚಾರಣೆ ಮಾಡಬಹುದು.

21 ದಿನಗಳ ನಂತರ ನೀವು ಮತ್ತೆ ಅವರೊಂದಿಗೆ ಸಂಪರ್ಕಿಸಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಿ ಮತ್ತು ಅರ್ಜಿಯನ್ನು ಕಠಿಣವಾಗಿ ತೆಗೆದುಕೊಳ್ಳುತ್ತದೆ ಏಕೆಂದರೆ ನೀವು ತಕರಾರು ಅರ್ಜಿ ಸಲ್ಲಿಸುವುದು ಮತ್ತು ಇತರೆ ಬೇರೆ ಅರ್ಜಿಗಳು ಸಲ್ಲಿಸುವುದು ತುಂಬಾ ವಿಭಿನ್ನವಾಗಿರುತ್ತದೆ ಏಕೆಂದರೆ ನೀವು ತೊಂದರೆಯಲ್ಲಿರುವ ಸಮಯದಲ್ಲಿ ಈ ರೀತಿ ಅರ್ಜಿಗಳನ್ನು ನೀವು ಬರೆಯುತ್ತೀರಿ ಹಾಗೂ ಇನ್ನಿತರ ಅವಶ್ಯಕತೆಗಳಿದ್ದಲ್ಲಿ ನೀವು ಬೇರೆ ಬೇರೆ ರೀತಿ ಅರ್ಜಿಗಳನ್ನು ಹಾಕುತ್ತೀರಿ ಹೀಗಾಗಿ ಕೇವಲ 21 ದಿನಗಳಲ್ಲಿ ಇದರ ಪರಿಹಾರವನ್ನು ನೀವು ಪಡೆಯಬಹುದು.

ನೀವು ಇನ್ನೊಬ್ಬರಿಗೆ ಜಮೀನವನ್ನು ಮಾರಾಟ ಮಾಡಲು ಬಯಸಿದ್ದೀರಿ ಮತ್ತು ನಿಮ್ಮ ಅಕ್ಕ-ತಂಗಿಯರು ನಿಮಗೆ ಜಮೀನು ಮಾರಾಟ ಮಾಡಲು ಬಿಡುತ್ತಿಲ್ಲ ಹೀಗಾಗಿ ಪ್ರತಿಯೊಬ್ಬ ತಂದೆಯ ಮಕ್ಕಳಿಗೆ ಹೆಣ್ಣು ಮಗು ಅಥವಾ ಗಂಡು ಮಗು ಅವರಿಗೂ ಸಹ ಹಾಕಿರುವುದರಿಂದ ಹೆಣ್ಣು ಮಕ್ಕಳು ಕೂಡ ನಿಮಗೆ ಜಮೀನ ಮಾರಾಟ ಮಾಡುವಲ್ಲಿ ಅವರು ಪಾಲ ಕೇಳಬಹುದು ಅಂದರೆ ಅವರ ಪಾಲಿಗೆ ಎಷ್ಟು ಬರುತ್ತದೆಯೋ ಅಷ್ಟು ಬಿಟ್ಟು ನಿಮ್ಮ ಸ್ವಂತಕ್ಕೆ ಬರುವ ಜಮೀನವನ್ನು ಸಹ ನೀವು ಮಾರಾಟ ಮಾಡಬಹುದು ಆದರೆ ಆ ಸಮಯದಲ್ಲಿ ಅವರು ಒಪ್ಪದೇ ಇದ್ದಲ್ಲಿ ತಕರಾರು ಅರ್ಜಿಯನ್ನು ಅವರು ನಿಮ್ಮ ಮೇಲೆ ಸಲ್ಲಿಸಬಹುದು ಹೀಗಾಗಿ ಪ್ರತಿಯೊಬ್ಬರೂ ಕೂಡ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅನಿವಾರ್ಯ ಮತ್ತು ಅವಶ್ಯಕತೆ ಇರುತ್ತದೆ.

ನಮ್ಮ ಕರ್ನಾಟಕದಲ್ಲಿ ಈ ರೀತಿ ಅರ್ಜಿಗಳು ಸಾಕಷ್ಟು ಲೆಕ್ಕವಿಲ್ಲದಷ್ಟು ಅರ್ಜಿಗಳು ಸಲ್ಲಿಕೆ ಆಗಿವೆ ಮತ್ತು ಅದರಲ್ಲಿ ಬಹಳಷ್ಟು ಅರ್ಜಿಗಳು ಪೂರ್ಣಗೊಂಡಿವೆ ಅಂದರೆ ಅರ್ಜಿ ಸಲ್ಲಿಸಿದ ನಂತರ ಅದಕ್ಕೆ ಪರಿಹಾರ ಸಿಕ್ಕಿವೆ ಮತ್ತು ಇನ್ನು ಕೆಲವೊಂದು ಅರ್ಜಿಗಳಿಗೆ ಪರಿಹಾರ ಸಿಗುವುದಿಲ್ಲ ಅಂತ ಸಮಯದಲ್ಲಿ ಅಂತಹ ಅರ್ಜಿಗಳನ್ನು ಮರುಪರುಶೀಲನೆ ಮಾಡಲಾಗುತ್ತದೆ ಮತ್ತು ಆಗದೆ ಇದ್ದಲ್ಲಿ ಮತ್ತೊಮ್ಮೆ ಅರ್ಜಿಯನ್ನು ನೀವು ಸಲ್ಲಿಸಬೇಕಾಗುತ್ತದೆ ಹೀಗಾಗಿ ಪ್ರತಿಯೊಂದು ಕೂಡ ಯಾವುದೇ ಪ್ರಮುಖವಾಗಿ ತಕರಾರು ಅರ್ಜಿಗಳನ್ನು ಕಠಿಣವಾಗಿ ತೆಗೆದುಕೊಳ್ಳಬೇಕು ಏಕೆಂದರೆ ಯಾವುದೇ ರೀತಿಯ ಅಸಭ್ಯ ಚಟುವಟಿಕೆಗಳಿಗೆ ಇದು ಮಾರಕವಾಗಿ ಕೆಲಸ ಮಾಡುತ್ತದೆ ಮತ್ತು ಸತ್ಯತೆ ಕಡೆಗೆ ತೆಗೆದುಕೊಂಡು ಹೋಗುತ್ತದೆ.

ನೀವು ಇಲ್ಲಿಯವರೆಗೆ ತಕರಾರು ಅರ್ಜಿ ಕೊಟ್ಟಿದ್ದೀರಾ?

ಸಾಮಾನ್ಯವಾಗಿ ನಿಮ್ಮ ಒಂದು 20ರಿಂದ 30 ವರ್ಷದ ಅವಧಿಯಲ್ಲಿ ಖಂಡಿತವಾಗಿಯೂ ನೀವು ತಕರಾರು ಅರ್ಜಿ ಕೊಟ್ಟಿರುತ್ತೀರಿ ಏಕೆಂದರೆ ತಕರಾರು ಅರ್ಜಿ ಸರ್ವೇಸಾಮಾನ್ಯ ಅರ್ಜಿಯಾಗಿದೆ ಏನಾದರೂ ತೊಂದರೆಯಾದಲ್ಲಿ ನಿಮ್ಮ ಬಾಯಿ ಮಾತಲ್ಲಿ ಅವರು ಕೇಳದೆ ಇದ್ದಲ್ಲಿ ಸರ್ವೇ ಸಾಮಾನ್ಯವಾಗಿ ನೀವು ತಕರಾರು ಅರ್ಜಿಯನ್ನು ಕೊಡಬೇಕಾಗುತ್ತದೆ ಮತ್ತು ಅದರ ಮೊರೆಯನ್ನು ಹೋಗಬೇಕಾಗುತ್ತದೆ ಅದಕ್ಕಾಗಿ ಈ ಅರ್ಜಿಯ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅವಶ್ಯಕತ್ತೆ ಆಗಿದೆ.

ನೀವು ಕೂಡ ಒಳ್ಳೆಯ ಕೆಲಸಕ್ಕಾಗಿ ತಕರಾರು ಅರ್ಜಿಯನ್ನು ಕೊಡುತ್ತಿದ್ದರೆ ತಕ್ಷಣವಾಗಿ ಹಿಂದೆ ನೀವು ನಿಮ್ಮ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ತಲಾಟಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೇಟಿ ನೀಡಬಹುದು ಅಥವಾ ಕಂದಾಯ ಇಲಾಖೆಗೆ ಸಂಬಂಧಪಟ್ಟಿರುವ ತಕರಾರು ಅರ್ಜಿಯಾಗಿದ್ದರೆ ಕಂದಾಯ ಇಲಾಖೆಗೆ ಭೇಟಿ ನೀಡಿ ಮತ್ತು ಇನ್ನಿತರ ಯಾವುದೇ ರೀತಿಯ ಸಂಬಂಧ ಪಟ್ಟ ಇಲಾಖೆಗಳಿಗೆ ಅದಕ್ಕೆ ಯಾದ ತಕರಾರು ವರ್ಜಿಯನ್ನು ನೀಡಬೇಕಾದರೆ ನೀವು ಆಯಾ ಇಲಾಖೆಗಳಿಗೆ ಸಂಪರ್ಕ ಮಾಡಬೇಕಾಗುತ್ತದೆ.

ಕೃಷಿ ಮಾರಾಟ ವಾಹಿನಿ

View all posts by ಕೃಷಿ ಮಾರಾಟ ವಾಹಿನಿ →

One thought on “ಜಮೀನಿಗೆ ತಕರಾರು ಅರ್ಜಿ ಎಂದರೇನು ಹೇಗೆ ಸಲ್ಲಿಸಬೇಕು? Application for objection request

Leave a Reply

Your email address will not be published. Required fields are marked *