March 11, 2025

ಜಮೀನು ಕಾಲುದಾರಿ ಬಂಡಿದಾರಿ ಮತ್ತು ಊರಿಗೆ ದಾರಿ? ಸರ್ಕಾರದಿಂದ ಮಾಡಿಕೊಳ್ಳುವುದು ಹೇಗೆ? Land roads

ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಸಮಸ್ಯೆ ಯಾರಿಗಿಲ್ಲ ಹೇಳಿ ಪ್ರತಿಯೊಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾದರೆ ಜಮೀನಿನಿಂದ ಜಮೀನಿಗೆ ಆಗಲಿ ಊರಿನಿಂದ ಊರಿಗೆ ಆಗಲಿ, ಹಳ್ಳಿಯಿಂದ ಹಳ್ಳಿಗೆ ಹೋಗುವುದಾಗಲಿ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೆಜ್ಜೆ ಇಡಬೇಕಾದರೆ ಪ್ರತಿಯೊಂದಕ್ಕೂ ದಾರಿ ಅವಶ್ಯಕತೆ ಇದೆ ದಾರಿ ಎಂದರೆ ನೀವು ಸಾಮಾನ್ಯವಾಗಿ ನಡೆದಾಡಿಕೊಂಡು ಎಲ್ಲಿ ಬೇಕಾದರೂ ಹೋಗಬಹುದು ಆದರೆ ನೀವು ನಿಮ್ಮ ವಹಿಕಲ್ ಅಥವಾ ನಿಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬೇಕಾದರೆ ದಾರಿ ಕಡ್ಡಾಯವಾಗಿ ಬೇಕಾಗುತ್ತದೆ.

ನಿಮಗೂ ಕೂಡ ದಾರಿ ಸಮಸ್ಯೆ ಆಗುತ್ತಿದೆಯಾ?

ನಮಗೆ ತಿಳಿದಿರುವ ಹಾಗೆ ಈ ಭೂಮಿ ಮೇಲೆ ದಾರಿ ಸಮಸ್ಯೆ ಇಲ್ಲದವನು ಯಾರು ಇಲ್ಲ ಪ್ರತಿಯೊಬ್ಬರಿಗೂ ಕೂಡ ದಾರಿ ಸಮಸ್ಯೆ ಇದ್ದೇ ಇರುತ್ತದೆ ಪ್ರಸ್ತುತವಾಗಿ ನಾವು ರೈತರ ಬಗ್ಗೆ ಮಾತನಾಡುವುದಾದರೆ ಸಾಕಷ್ಟು ರೈತರು ತಮ್ಮ ಜಮೀನುಗಳು ರಸ್ತೆ ಪಕ್ಕದಲ್ಲಿ ಇರುವುದಿಲ್ಲ ಹೊರ ತಾಯಿ ಬೇರೆ ಬೇರೆ ಪ್ರದೇಶಗಳಲ್ಲಿ ಜಮೀನು ಹೊಂದಿರುತ್ತಾರೆ, ಆ ಜಮೀನುಗಳಿಗೆ ಹೋಗಲು ದಾರಿ ಅವಶ್ಯಕತೆ ಇದೆ.

ಹಾಗಿದ್ದರೆ ದಾರಿ ಸಮಸ್ಯೆ ಒಂದು ಬಹುದೊಡ್ಡ ಸಮಸ್ಯೆ ಆಗಿದೆ ಇದಕ್ಕೆ ಆದ ಸಾಕಷ್ಟು ಕೇಂದ್ರ ಸರ್ಕಾರವು ಕೂಡ ಹೆಚ್ಚು ಕಾಳಜಿ ವಹಿಸಿದೆ ಅದಾಗಿಯೂ ಸಹ ಇನ್ನೂವರೆಗೆ ಈ ದಾರಿ ಸಮಸ್ಯೆಗಳು ಬಗೆಹರಿದಿಲ್ಲ ಮತ್ತು ಸ್ವಲ್ಪ ದಿನಗಳು ನೀಡಿದರು ಕೂಡ ಮುಂದೆ ಮತ್ತೆ ಅದನ್ನು ಬಂದ್ ಮಾಡುತ್ತಾರೆ ಹೀಗಾಗಿ ಇದಕ್ಕೆ ಆದ ನಿಖರತೆ ಇಲ್ಲ.

ದಾರಿ ಸಮಸ್ಯೆ ಬಗ್ಗೆ ಇವತ್ತು ತಿಳಿದುಕೊಳ್ಳೋಣ ಮತ್ತು ಅಧಿಕೃತವಾಗಿ ಸರ್ಕಾರದಿಂದ ದಾರಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಹೇಗೆ ಮತ್ತು ಯಾವುದೆಲ್ಲ ದಾಖಲೆಗಳು ಬೇಕಾಗುತ್ತದೆ ಮತ್ತು ಎಲ್ಲಿ ಸಂಪರ್ಕಿಸಬೇಕಾಗುತ್ತದೆ ಎಲ್ಲವೂ ನೀವು ತಿಳಿದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಿಮಗೆ ಇರುವ ಅವಕಾಶಗಳು ಅಂದರೆ ನೀವು ದಾರಿಯನ್ನು ಯಾವಾಗ ಪಡೆದುಕೊಳ್ಳಬಹುದು ಮತ್ತು ಯಾವಾಗ ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಸರ್ವೇ ನಂಬರ್ ನಲ್ಲಿ ದಾರಿ ತೋರಿಸುತ್ತದೆ ಮತ್ತು ಸರ್ವೆ ನಂಬರುಗಳಲ್ಲಿ ದಾರಿ ಇದ್ದರೂ ಸಹ ನಿಮಗೆ ದಾರಿ ಬಿಡುತ್ತಿಲ್ಲವೇ ಅದಕ್ಕೆ ನಿರ್ಧಾರ ಹೇಗೆ ಕೈಗೊಳ್ಳಬೇಕು ಎಲ್ಲವೂ ಇವರವಾಗಿ ಕೆಳಗಡೆ ತಿಳಿಸುತ್ತಾ ಹೋಗುತ್ತೇವೆ ತಪ್ಪದೇ ನೋಡಿ.

ಸಾಮಾನ್ಯವಾಗಿ ದಾರಿ ಸಮಸ್ಯೆ ಏಕಾಗುತ್ತದೆ?

ನಿಮ್ಮ ಊರಿನವರಿಗೆ ಖಂಡಿತವಾಗಿಯೂ ದಾರಿ ಸಮಸ್ಯೆ ಇರುವುದಿಲ್ಲ ಏಕೆಂದರೆ ಪ್ರತಿಯೊಬ್ಬರಿಗೂ ಕೂಡ ಅದು ಅವಶ್ಯಕತೆ ಆಗಿರುತ್ತದೆ ನಂತರ ನೀವು ನಿಮ್ಮ ಊರನ್ನು ಬಿಟ್ಟು ನಿಮ್ಮ ಹೊಲದ ದಾರಿಗಳಿಗೆ ಹೋಗುತ್ತಾ ನೋಡುವುದಾದರೆ ರಸ್ತೆ ಪಕ್ಕದಲ್ಲಿರುವವರಿಗೆ ಹಾದಿ ಅವಶ್ಯಕತೆ ಇರುವುದಿಲ್ಲ ಅದೇ ನೀವು ಸ್ವಲ್ಪ ದಾರಿ ಬಿಟ್ಟು ದೂರವಿದ್ದರೆ ನಿಮಗೆ ದಾರಿ ಅವಶ್ಯಕತೆ ಇದೆ, ಆ ಸಮಯದಲ್ಲಿ ಅವರೊಂದಿಗೆ ನೀವು ಕಲಹವನ್ನು ಮಾಡಿದಾಗ ಅಥವಾ ಯಾವುದೇ ಕಾರಣಗಳಿಂದಾಗಿ ಜಗಳ ಆಡಿದಾಗ ಅವರು ದಾರಿ ಬಂದ್ ಮಾಡುತ್ತಾರೆ.

ಇಂತಹ ಸಮಯದಲ್ಲಿ ನೀವು ಪೊಲೀಸ್ ಕಂಪ್ಲೇಂಟ್ ಹೋಗಬೇಕಾಗುತ್ತದೆ ಸಾಮಾನ್ಯವಾಗಿ ಊರಿನ ಹಿರಿಯರು ಅದನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಾರೆ ಅದಾಗಿಯೂ ಆತರು ಅಥವಾ ಅವರು ಒಪ್ಪಿಕೊಳ್ಳದೆ ಇದ್ದಲ್ಲಿ ನೀವು ಕಾನೂನಿನ ಕಠಿಣ ಕ್ರಮಗಳಿಗೆ ಕೈಗೊಂಡ ಬೇಕಾಗುತ್ತದೆ. ಅದಕ್ಕಾಗಿ ಇರುವ ಕೆಲವೊಂದು ಅಧಿಕೃತ ಮಾಹಿತಿಗಳನ್ನು ನಾವು ಇಲ್ಲಿ ಕೆಳಗಡೆ ನೀಡುತ್ತೇವೆ.

ನಿಮ್ಮ ಜಮೀನಿಗೆ ಹೋಗಲು ಅಧಿಕೃತ ದಾರಿ ಪಡೆಯುವ ವಿಧಾನ ಹೇಗೆ?

ಕರ್ನಾಟಕ ಸರ್ಕಾರ ಇಸ್ಮೆಂಟ್ ಕಾನೂನಿನ ಪ್ರಕಾರ ಪ್ರತಿಯೊಬ್ಬ ಜಮೀನಿನ ಮಾಲೀಕನು ತನ್ನ ಜಮೀನಿಗೆ ಅಧಿಕೃತ ದಾರಿಯನ್ನು ಹೊಂದಬಹುದು ಎಂದು ಹೇಳುತ್ತದೆ ಅಂದರೆ ನೀವು ಪ್ರಸ್ತುತವಾಗಿ ಭೂಮಿಯನ್ನು ಉಳಿಮೆ ಮಾಡುತ್ತಿದ್ದು ಅದರಲ್ಲಿ ನೀವು ಸತತವಾಗಿ ಹತ್ತರಿಂದ ಹದಿನೈದು ವರ್ಷಗಳ ಕಾಲ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದು ನಿಮಗೆ ತಕ್ಷಣವಾಗಿ ದಾರಿ ಬಂದ್ ಮಾಡಿದರೆ, ಅಂತಹ ಸಮಯದಲ್ಲಿ ನೀವು ನಿಮ್ಮ ತಹಶೀಲ್ದಾರ್ ಅವರಿಗೆ ಭೇಟಿ ನೀಡಿ ಅರ್ಜಿಯನ್ನು ಕೊಡಬಹುದು.

ಇದಕ್ಕೆ ತಕ್ಷಣವಾಗಿ ಅವರು ಕ್ರಮಗಳನ್ನು ಕೈಗೊಂಡು ಕೇವಲ 24 ಗಂಟೆಗಳಲ್ಲಿ ಈ ಕಾರ್ಯವನ್ನು ಮುಗಿಸುತ್ತಾರೆ ಏಕೆಂದರೆ ಇದು ಯಾರೇ ಜಮೀನು ಆಗಿರಲಿ ಮತ್ತು ಅವರು ಎಷ್ಟೇ ದ್ವೇಷ ಹೊಂದಿರಲಿ ದಾರಿಯನ್ನು ನೀಡಬೇಕಾಗುತ್ತದೆ ಪ್ರತಿಯೊಬ್ಬ ಜೀವಿಗೂ ತಾನು ಬದುಕಲು ಅವಕಾಶವಿರುವುದರಿಂದ ಅದಕ್ಕಾಗಿ ಕಾನೂನು ಸಹ ಆತನಂತೆ ಹೇಳುತ್ತದೆ.

ನಿಮ್ಮ ಊರಿಗೆ ಹೋಗಲು ದಾರಿ ಇಲ್ಲವೇ?

ನೀವು ಸಾಮಾನ್ಯವಾಗಿ ಸಣ್ಣಪುಟ್ಟ ಹಳ್ಳಿಗಳಲ್ಲಿ ವಾಸವಾಗಿದ್ದೀರಿ ಮತ್ತು ನಿಮ್ಮ ಊರಿಗೆ ಹೋಗಲು ದಾರಿ ಇಲ್ಲವಾದರೂ ಸಹ ನೀವು ದಾರಿಯನ್ನು ಮಾಡಿಕೊಳ್ಳಬಹುದು ಇದಕ್ಕೆ ಯಾವುದೇ ರೀತಿಯ ಕಾನೂನುಗಳು ಅಡ್ಡಿಯಾಗುವುದಿಲ್ಲ ನಿಮಗೆ ಅವಶ್ಯಕತೆ ಇರುವರ 10 ರಿಂದ 15 ರೈತರುಗಳು ಕೂಡಿ ಒಂದು ಅರ್ಜಿಯನ್ನು ನಿಮ್ಮ ತಾಲೂಕು ಉಪನಿರ್ದೇಶಕರು ಕಚೇರಿಗೆ ನೀಡಬೇಕು. ಅರ್ಜಿಯಲ್ಲಿ ನಿಮ್ಮ ಎಲ್ಲರ ಹೆಸರನ್ನು ಬರೆಯಬೇಕು ಮತ್ತು ನೀವು ಈಗಾಗಲೇ ಎಷ್ಟು ವರ್ಷದಿಂದ ಅಲ್ಲಿ ನೀವು ವ್ಯವಸಾಯ ಮಾಡುತ್ತಿದ್ದೀರಿ ಅದನ್ನು ಸಹ ನೀವು ಬರೆದಿರಬೇಕು. ಇದೆಲ್ಲಾ ಆದ ನಂತರ ಅರ್ಜಿಯಲ್ಲಿ ನಿಮಗೆ ಈ ದಾರಿಯಿಂದ ಆಗುವ ಪ್ರಯೋಜನಗಳು ಸಹ ಬರೆಯಬೇಕಾಗುತ್ತದೆ.

ಈ ಅರ್ಜಿಗಳನ್ನು ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು?

ಈ ಅರ್ಜಿಯನ್ನು ಸಲ್ಲಿಸಲು ನಿಮಗೆ ಸಾಮಾನ್ಯ ದಾಖಲೆಗಳ ಅವಶ್ಯಕತೆ ಇದೆ ಅಂದರೆ ನಿಮ್ಮ ಪಹಣಿ ಪತ್ರದ ಅವಶ್ಯಕತೆ ತುಂಬಾ ಇರುತ್ತದೆ ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ಇದರೊಂದಿಗೆ ನೀವು ಭಾವಚಿತ್ರವನ್ನು ಹಚ್ಚಿದರೆ ತುಂಬಾ ಒಳ್ಳೆಯದು ಅಥವಾ ಅರ್ಜಿ ನಮೂನೆ ಅರ್ಜಿ ನಮೂನೆ ಸಾಮಾನ್ಯವಾಗಿ ಇದರ ಅರ್ಜಿ ನಮೂನೆ ನಿಮಗೆ ದೊರೆಯುವುದಿಲ್ಲ ಅದಕ್ಕಾಗಿ ನೀವು ಕೈ ಬರಹದಿಂದ ಅರ್ಜಿಯನ್ನು ತಾಲೂಕು ಉಪನಿರ್ದೇಶಕರ ಕಚೇರಿಗೆ ಬರೆಯಬೇಕು ಅದರೊಂದಿಗೆ ನಿಮ್ಮ ಎಷ್ಟು ಜನರಿಗೆ ದಾರಿ ಸಮಸ್ಯೆ ಇದೆ ನೀವೆಲ್ಲರೂ ಕೂಡ ನಿಮ್ಮ ಪಹಣಿ ಪತ್ರವನ್ನು ಅದಕ್ಕೆ ಲಗತಿಸಬೇಕು ಅದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಸಹ ಲಗತ್ತಿಸಬೇಕು.

ಎಲ್ಲ ದಾಖಲೆಗಳೊಂದಿಗೆ ಸಮನಾದ ಅಂದರೆ ಎಲ್ಲಾ ರೈತರು ಕೂಡ ಹತ್ತರಿಂದ ಹದಿನೈದು ರೈತರುಗಳು ಸೇರಿ ನೀವು ದಾರಿ ಸಮಸ್ಯೆಗೆ ಅರ್ಜಿಯನ್ನು ಬರೆದ ನಂತರ ಎಲ್ಲರೂ ಹೋಗಿ ನಿಮ್ಮ ತಾಲೂಕು ಉಪ ನಿರ್ದೇಶಕರ ಕಚೇರಿ ಅಧಿಕಾರಿಯನ್ನು ಅಂದರೆ ತಸಿಲ್ದಾರ್ ಅವರನ್ನು ಭೇಟಿ ನೀಡಿ ಈ ರೀತಿ ಆದ ತೊಂದರೆ ನಮಗೆ ಆಗುತ್ತಿದೆ ಸರ್ ದಯವಿಟ್ಟು ಈ ಅವಕಾಶವನ್ನು ನಮಗೆ ಮಾಡಿಕೊಡಿ ಎಂದು ಕೇಳಿಕೊಳ್ಳಬೇಕು ನಂತರ ಅವರಿಗೆ ಈ ರೀತಿಯಾದ ಹಕ್ಕನ್ನು ನೀಡಲು ಅವಕಾಶವಿರುತ್ತದೆ, ಖಂಡಿತವಾಗಿಯೂ ಅವರು ನಿಮಗೆ ಊರಿಗೆ ಹೋಗಲು ದಾರಿಯನ್ನು ಮಾಡಿಕೊಡುತ್ತಾರೆ.

ಗ್ರಾಮ ಪಂಚಾಯಿತಿಗಳು ಅಥವಾ ತಾಲೂಕು ಪಂಚಾಯಿತಿಗಳಿಂದ ದಾರಿ ಮಾಡಬಹುದಾ?

ಖಂಡಿತವಾಗಿಯೂ ಮಾಡಬಹುದು ನಾವು ಮೇಲೆ ತಿಳಿಸಿದಂತೆ ಕಡಿಮೆ 20 ರಿಂದ 25 ರೈತ ಕುಟುಂಬಗಳಿದ್ದು ಆ ರೈತ ಕುಟುಂಬಗಳಿಗೆ ಸರಿಯಾದ ದಾರಿ ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗಳಿಂದ ದಾರಿಯನ್ನು ಮಾಡಿಕೊಳ್ಳಬಹುದು. ಅಂದರೆ ಸಾಮಾನ್ಯ ದಾರಿ ಕಾಲುದಾರಿ ಅಥವಾ ಬಂಡಿದಾರಿಯನ್ನು ಮಾಡಿ ಕೊಡುವ ಅವಕಾಶ ಗ್ರಾಮ ಪಂಚಾಯಿತಿಗಳಲ್ಲಿ ಇರುತ್ತದೆ. ಈ ರೀತಿಯಾದ ಕಾರ್ಯಗಳು ನಿಮಗೆ ಗೊತ್ತಿರಬಹುದು ಅಥವಾ ಈಗಾಗಲೇ ನೀವು ಈ ದಾರಿಗಳನ್ನು ಸಹ ಮಾಡಿಕೊಂಡಿರಬಹುದು.

ತಾಲೂಕು ಪಂಚಾಯಿತಿಗಳಿಂದ ಸಹ ದಾರಿ ಮಾಡಿಕೊಡುವ ಅವಕಾಶವಿರುತ್ತದೆ ಇವರು ತುಂಬಾ ದೊಡ್ಡ ಮಟ್ಟದ ದಾರಿಯನ್ನು ಮಾಡಬಹುದು ಇದಕ್ಕೆ ಮತ್ತೆ ನಾವು ಮೇಲೆ ತಿಳಿಸಿದಂತೆ ಹಲವಾರು ಜನರು ಸೇರಿ ಅದಕ್ಕೆ ತಕ್ಕಂತೆ ಅರ್ಜಿಯನ್ನು ಸಲ್ಲಿಸಿ ಸಮಸ್ಯೆಗಳನ್ನು ಕೇಳಿಕೊಂಡು ಸ್ವಲ್ಪ ಹೋರಾಟ ಮತ್ತು ವಿನಂತಿ ಮಾಡಿಕೊಳ್ಳುವುದರಿಂದ ಇದಕ್ಕೂ ಸಹ ಪರಿಹಾರ ದೊರೆಯುತ್ತದೆ.

ಈ ರೀತಿಯಾಗಿ ನಾವು ಮೇಲೆ ತಿಳಿಸಿದಂತೆ ಹಲವಾರು ವಿಧಾನಗಳಿಂದ ನಿಮ್ಮ ಊರಿಗೆ ದಾರಿ ಆಗಿರಬಹುದು ನಿಮ್ಮ ಜಮೀನಿಗೆ ಹೋಗುವ ದಾರಿಯಾಗಿರಬಹುದು ಮತ್ತು ಹತ್ತಾರು ಹಲವಾರು ರೈತರುಗಳಿಗೆ ಸಾಮಾನ್ಯ ದಾರಿ ಆಗಿರಬಹುದು ಈ ರೀತಿಯಾಗಿ ನೀವು ಬಾರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಕರ್ನಾಟಕ ಸರಾಗಗೊಳಿಸುವ ಕಾಯಿದೆಯನ್ನು 1882 ರ ಭಾರತೀಯ ಸರಾಗಗೊಳಿಸುವ ಕಾಯಿದೆಯಿಂದ ರಚಿಸಲಾಗಿದೆ, ಇದು ಸರಾಗತೆಯನ್ನು ರಚಿಸಲು, ವರ್ಗಾಯಿಸಲು ಮತ್ತು ನಂದಿಸಲು ಅನುವು ಮಾಡಿಕೊಡುತ್ತದೆ. ಸುಲಭವಾಗಿ ಗ್ರಹಿಸಬಹುದಾದ ಕಾನೂನು ವ್ಯಾಖ್ಯಾನವು ಬೇರೊಬ್ಬರ ಭೂಮಿಯನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸುವ ಹಕ್ಕಾಗಿರುತ್ತದೆ.

*ಭೂಮಿಗೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳು*

1)ಅನುದಾನದ ಸರಾಗತೆ: ಒಬ್ಬ ವ್ಯಕ್ತಿಯು ಇನ್ನೊಬ್ಬರ ಭೂಮಿಗೆ ಇನ್ನೊಬ್ಬ ಹಕ್ಕನ್ನು ನೀಡುವ ಎಕ್ಸ್‌ಪ್ರೆಸ್ ಅಥವಾ ಸೂಚ್ಯ ಅನುದಾನದಿಂದ ರಚಿಸಲಾದ ಸರಾಗತೆ.

2)ಅವಶ್ಯಕತೆಯ ಸುಲಭತೆ: ಒಬ್ಬ ವ್ಯಕ್ತಿಯು ತನ್ನ ಸ್ವಂತ ಭೂಮಿಯನ್ನು ಅನುಭವಿಸುವ ಸಲುವಾಗಿ ಇನ್ನೊಬ್ಬ ವ್ಯಕ್ತಿಯ ಭೂಮಿಗೆ ಪ್ರವೇಶವನ್ನು ಹೊಂದುವ ಅವಶ್ಯಕತೆಯಿಂದಾಗಿ ರಚಿಸಲಾದ ಸರಾಗತೆ.

3)ಸುಲಭೀಕರಣದ ಹಿಂತೆಗೆದುಕೊಳ್ಳುವಿಕೆ:ಭಾರತೀಯ ಸರಾಗಗೊಳಿಸುವ ಕಾಯಿದೆ, 1882 ರ ಸೆಕ್ಷನ್ 60 ರ ಪ್ರಕಾರ ಯಾವುದೇ ಸರಾಗತೆಯನ್ನು ಹಿಂಪಡೆಯಬಹುದು.

ಕರ್ನಾಟಕದಲ್ಲಿ ಅನ್ವಯಿಸುವಿಕೆ:

ಕರ್ನಾಟಕ ಸರಾಗಗೊಳಿಸುವ ಕಾಯಿದೆಯು ನಿರ್ದಿಷ್ಟವಾಗಿ ಕರ್ನಾಟಕ ರಾಜ್ಯಕ್ಕೆ ಅನ್ವಯಿಸುತ್ತದೆ ಆದರೆ ಮಾರ್ಪಾಡು ನಿರ್ದಿಷ್ಟವಾಗಿ ಕೇಂದ್ರ ಕಾಯಿದೆಯನ್ನು ಪೂರೈಸುತ್ತದೆ. ಕರ್ನಾಟಕ ಹೈಕೋರ್ಟ್ ಕೂಡ ಈ ಕಾಯಿದೆಯನ್ನು ಜಾರಿಗೊಳಿಸಿದೆ ಮತ್ತು ಕರ್ನಾಟಕ ರಾಜ್ಯದಲ್ಲಿ ಸರಾಗಗೊಳಿಸುವ ಪ್ರದೇಶದಲ್ಲಿ ಕಾಯಿದೆಯ ಅನ್ವಯಕ್ಕೆ ಕಾನೂನು ಚೌಕಟ್ಟನ್ನು ಒದಗಿಸಿದೆ.

ಭೂಮಿ ಸಂಬಂಧಿತ ವಿವಾದಗಳು:ಭೂಮಿಗೆ ಸಂಬಂಧಿಸಿದ ವಿವಾದಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಸುಗಮೀಕರಣ ಕಾಯಿದೆಯು ದಾರಿಯ ಹಕ್ಕಿನಂತಹ ಸುಲಭ ಹಕ್ಕುಗಳ ಬಗ್ಗೆ ಸಾಮಾನ್ಯ ಕಾನೂನನ್ನು ಒದಗಿಸುತ್ತದೆ. ಉದಾಹರಣೆಗೆ, ಆಸ್ತಿ ಮಾಲೀಕರು ಭೂಮಿಯನ್ನು ಪ್ರವೇಶಿಸಲು ಇನ್ನೊಬ್ಬ ಮಾಲೀಕರ ಭೂಮಿಗೆ ಹೋಗಬೇಕಾದರೆ, ಅನುದಾನ ಅಥವಾ ಅವಶ್ಯಕತೆಯ ಮೂಲಕ ಭೂಮಿಯ ಮೇಲೆ ಸುಲಭವಾದ ಹಕ್ಕನ್ನು ಹೊಂದಿರುವವರು ಯಾರು ಎಂಬುದನ್ನು ಒದಗಿಸಲು ಕಾಯಿದೆಯು ಸಹಾಯ ಮಾಡುತ್ತದೆ.

ಕೃಷಿ ಮಾರಾಟ ವಾಹಿನಿ

View all posts by ಕೃಷಿ ಮಾರಾಟ ವಾಹಿನಿ →

3 thoughts on “ಜಮೀನು ಕಾಲುದಾರಿ ಬಂಡಿದಾರಿ ಮತ್ತು ಊರಿಗೆ ದಾರಿ? ಸರ್ಕಾರದಿಂದ ಮಾಡಿಕೊಳ್ಳುವುದು ಹೇಗೆ? Land roads

Leave a Reply

Your email address will not be published. Required fields are marked *