ವಿಜಯಪುರ ಕೃಷಿ ಮಹಾವಿದ್ಯಾಲಯ ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಿಟ್ಟನಹಳ್ಳಿ ಫಾರ್ಮ್ನಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ ದಿನಾಂಕ ಜನವರಿ 11 12 ಮತ್ತು 13ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ಸಾಕಷ್ಟು ಜನರು ಆಗಮಿಸುತ್ತಾರೆ ಮತ್ತು ವಿವಿಧ ಕೃಷಿ ಹೊಸತನವನ್ನು ನೋಡುವುದಕ್ಕಾಗಿ ರೈತರು ಕಾತುರದಿಂದ ಕಾಯುತ್ತಿದ್ದಾರೆ.
ಕೃಷಿ ಮೇಳ ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಹಾಗೆ ಬೆಂಗಳೂರು ಧಾರವಾಡ ರಾಯಚೂರು ವಿಶ್ವವಿದ್ಯಾಲಯಗಳಲ್ಲಿ ದೊಡ್ಡಮಟ್ಟದ ಕೃಷಿ ಮೇಳ ನಡೆಯುತ್ತದೆ ಆದರೆ ಎಲ್ಲಾ ಭಾಗದಿಂದ ಅಲ್ಲಿ ರೈತರು ಹೋಗಲು ಕಷ್ಟವಾಗುತ್ತದೆ ಹೀಗಾಗಿ ಕೆಲವೊಂದು ಭಾಗಗಳಲ್ಲಿ ಉದಾಹರಣೆಗೆ, ಕೃಷಿಮೇಳ ವಿಜಯಪುರ ಇಲ್ಲಿ ಬಿಜಾಪುರ ಜಿಲ್ಲೆ ರೈತರು ಬಾಗಲಕೋಟ್ ಜಿಲ್ಲೆ ರೈತರು ಬೆಳಗಾವಿ ಜಿಲ್ಲೆ ರೈತರು ಹಾಗೂ ಯಾದಗಿರಿ ಮತ್ತು ಬೀದರ್ ಜಿಲ್ಲೆಯ ರೈತರುಗಳಿಗೆ ತುಂಬಾ ಸಮೀಪವಾಗುತ್ತದೆ ಮತ್ತು ಸಾಕಷ್ಟು ಜನರು ಕೃಷಿ ಮೇಳಕ್ಕೆ ಆಗಮಿಸುತ್ತಾರೆ.
ಈ ವರ್ಷದ ಕೃಷಿ ಮೇಳದ ವಿಶೇಷತೆ ಏನು?
ಕೃಷಿ ಮೇಳದಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ ಈ ವರ್ಷದ ಬಿಜಾಪುರ ಕೃಷಿ ಮೇಳದ ಉದ್ದೇಶವೇನೆಂದರೆ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ ” ಆಹಾರ ಭದ್ರತೆಗಾಗಿ ಪೌಷ್ಟಿಕ ಕೃಷಿ ಪದ್ಧತಿ” ಈ ವರ್ಷದ ಕೃಷಿ ಮೇಳದ ಮುಖ್ಯ ವಿಶೇಷತೆ ಇದಾಗಿದೆ ತಮ್ಮೆಲ್ಲರಿಗೂ ಗೊತ್ತು ಅತಿ ಹೆಚ್ಚು ರಾಸಾಯನಿಕ ಬಳಕೆಗಳಿಂದ ಭೂಮಿಗಳು ಹಾಳಾಗುತ್ತಿವೆ ಹೀಗಾಗಿ ನಾವು ತಿನ್ನುವ ಆಹಾರದಲ್ಲಿ ಸಾಕಷ್ಟು ರಾಸಾಯನಿಕ ಹೊಂದಿದೆ ಹೀಗಾಗಿ ನಮ್ಮ ಜೀವಿತ ಅವಧಿಗಳು ಕಡಿಮೆ ಆಗುತ್ತಾ ಬರುತ್ತಿವೆ ತಮ್ಮೆಲ್ಲರಿಗೂ ಕೂಡ ಗೊತ್ತಿದೆ.
ಮೊದಲು ಇನ ಜನರು ಅಂದರೆ ನಮ್ಮ ತಾತ ಮುತ್ತಜ್ಜರು ನೂರು ವರ್ಷಗಳ ಕಾಲ ಬಾಳಿ ಬದುಕುತ್ತಿದ್ದರು ಆದರೆ ಇದೀಗ ನಮ್ಮ ಆಯಸ್ಸು ಕೇವಲ 70 ವಯಸ್ಸು ಹೀಗಾಗಿ ಅದಕ್ಕೆ ಮುಖ್ಯ ಕಾರಣ ನಾವು ತಿನ್ನುವ ಆಹಾರ ಆಗಿರುತ್ತದೆ ಹೀಗಾಗಿ ಹೊಸದಾಗಿ ನಮಗೆ ಹಿಂದೆ ಇರುವ ರೂಢಿಯನ್ನು ನೋಡಿಕೊಂಡು ಕೇವಲ ಗೊಬ್ಬರಗಳನ್ನೇ ಬಳಕೆ ಮಾಡಿ ಇಳುವರಿ ತೆಗೆದು ಅದೇ ಇಳುವರಿ ಬಂದಿರುವುದನ್ನು ಮಾರಾಟ ಮಾಡಿ ಉಳಿದಿರುವುದನ್ನು ತಮ್ಮ ಮನೆ ಬಳಕೆಗಾಗಿ ಮತ್ತು ದಿನನಿತ್ಯ ಸೇವೆಯನ್ನು ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ನಾವು ಆರೋಗ್ಯವಾಗಿದ್ದರೂ ನಮ್ಮಲ್ಲಿರುವ ಅಂದರೆ ದೇಹದಲ್ಲಿರುವ ವ್ಯವಸ್ಥೆಯು ಹಾಳಾಗುತ್ತದೆ.
ಕೃಷಿಮೇಳ ವಿಶೇಷತೆಯ ವಿಶ್ಲೇಷಣೆ?
1)ಬರ ನಿರ್ವಹಣೆ ಪದ್ದತಿಗಳು:
ಬರ ನಿರ್ವಹಣೆ ಬಗ್ಗೆ ಕ್ರಮಗಳನ್ನು ವಿವರವಾಗಿ ತಿಳಿಸಲಾಗುತ್ತದೆ ಏಕೆಂದರೆ ಕಳೆದ ವರ್ಷ ಮಳೆ ಕಡಿಮೆಯಾಗಿತ್ತು ಹೀಗಾಗಿ ರೈತರು ಕೇವಲ ಒಂದು ಬೆಳೆಯನ್ನ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಯಿತು ಮತ್ತು ಎರಡನೇ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ ನೀರಿದ್ದವರು ಮಾತ್ರ ಬೆಳೆಗಳನ್ನು ಬೆಳೆದರು ಉಳಿದವರಿಗೆ ಬೆಳೆಗಳು ಬೆಳೆಯಲು ಸಾಧ್ಯವಾಗಿರಲಿಲ್ಲ ಹೀಗಾಗಿ ಈ ವರ್ಷವೂ ಕೂಡ ಬರ ನಿರ್ವಹಣೆ ಪದ್ಧತಿಗಳ ಬಗ್ಗೆ ಮಾಹಿತಿ ನೀಡಲಾಗುವುದು.
2) ಕೃಷಿ ಯಂತ್ರೋಪಕರಣ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ:
ಕೃಷಿ ಯಂತ್ರೋಪಕರಣಗಳ ಪ್ರದರ್ಶನವಿರುತ್ತದೆ ಸಾಮಾನ್ಯವಾಗಿ ರೈತರು ವಿವಿಧ ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಮಹತ್ವಪೂರ್ಣದ್ದಾಗಿದೆ ಇದಲ್ಲದೇನೇ ಸಾಕಷ್ಟು ರೈತರು ಜಮೀನಿನಲ್ಲಿ ಈ ಸಮಯದಲ್ಲಿ ಆಳುಗಳು ಸಿಗುತ್ತಿಲ್ಲ ಹೀಗಾಗಿ ಪ್ರತಿಯೊಬ್ಬರೂ ಯಂತ್ರೋಪಕರಣಗಳ ಮೇಲೆ ಅವಲಂಬನೆ ಆಗಬೇಕಾಗುತ್ತದೆ. ವಿಶೇಷ ಮತ್ತು ವಿಶಿಷ್ಟ ಯಂತ್ರೋಪಕರಣಗಳ ಪ್ರದರ್ಶನವನ್ನು ನೀವಿಲ್ಲಿ ನೋಡಬಹುದು.
3)ಕೀಟನಾಶಕ ಸಿಂಪರಣೆಗಾಗಿ “ಡ್ರೋನ್” ಬಳಕೆ:
ಆಧುನಿಕ ಯುಗದಲ್ಲಿ ಡ್ರೋನ್ ತಂತ್ರಜ್ಞಾನ ಕೂಡ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತದೆ ಹೊಸದಾಗಿ ಬಂದಿರುವ ನ್ಯಾನೋ ಉತ್ಪನ್ನಗಳನ್ನು ಸಿಂಪಡಣೆ ಮಾಡಲು ರೈತರಿಗೆ ತೊಂದರೆಯಾಗುತ್ತಿದೆ ಹೀಗಾಗಿ ಡ್ರೋನ್ಗಳ ಬಳಕೆ ಮಾಡುವುದು ಕಡ್ಡಾಯ ವಿವಿಧ ಕಂಪನಿಯ ಡ್ರೋನ್ಗಳು ಸಹ ನೀವಿಲ್ಲಿ ನೋಡಬಹುದು ಉದಾರಣೆಗೆ ಜೈ ಕಿಸಾನ್ ಕಂಪನಿಯ ಡ್ರೋನ್ ತೋರಿಸಲಾಗುವುದು.
4)ಸೌರ ಚಾಲಿತ ಮತ್ತು ಕಡಿಮೆ ತೂಕದ ಡಿಸೈಲ್ ಪಂಪಸೆಟ್‌ನಿಂದ ನೀರೆತ್ತುವುದು, ಸ್ವಯಂ ಚಾಲಿತ ಸೂಕ್ಷ್ಮ ನೀರಾವರಿ ಪದ್ದತಿ:
ಪ್ರಸ್ತುತವಾಗಿ ರಾಜ್ಯದಲ್ಲಿ ಎಲ್ಲಾ ಕೆಲಸ ಕಾರ್ಯಗಳು ಆಗಬೇಕಾದರೆ ವಿದ್ಯುತ್ ಅತ್ಯಂತ ಪ್ರಮುಖ ಮತ್ತು ಅದು ಇಲ್ಲದೆ ಬೇರೆ ವಿಧಾನಗಳನ್ನು ನಾವು ನೋಡಿದಾಗ ಅತ್ಯಂತ ಕಡಿಮೆ ವಿಧಾನಗಳು ನಮಗೆ ದೊರೆಯುತ್ತವೆ. ಉದಾಹರಣೆಗೆ ಸೌರ ಚಾಲಿತ ನೀರೆತ್ತುವ ಪಂಪುಗಳು ಮತ್ತು ಕಡಿಮೆ ದರದಲ್ಲಿ ಸಿಗುವಂತ ಪಂಪುಗಳು ಮತ್ತು ಸ್ವಯಂ ಚಾಲಿತ ಸೂಕ್ಷ್ಮ ನೀರಾವರಿ ಪದ್ಧತಿ.
5)ಕೃಷಿ ಹವಾಮಾನ ಶಾಸ್ತ್ರ ಘಟಕ:
ಪ್ರತಿಯೊಂದು ಬೆಳೆ ಚೆನ್ನಾಗಿ ಬೆಳೆಯಬೇಕಾದರೆ ಅದಕ್ಕೆ ತಕ್ಕ ಹಾಗೆ ವಾತಾವರಣ ಇದ್ದೇ ಇರಬೇಕು ವಾತಾವರಣದ ಬಗ್ಗೆ ಸಹ ನಿಮಗೆ ಮಾಹಿತಿ ನೀಡಲಾಗುತ್ತದೆ ವಾತಾವರಣ ಚೆನ್ನಾಗಿ ಇಲ್ಲದಿದ್ದರೆ ನೀವು ಯಾವುದೇ ರೀತಿ ಬೆಳೆಗಳನ್ನು ಬೆಳೆದರು ಕೂಡ ಅವು ಚೆನ್ನಾಗಿ ಇರುವುದಿಲ್ಲ ಏನಾದರೂ ಕೀಟಗಳಿಂದ ಹಾನಿಯಾಗಬಹುದು ಮತ್ತು ರೋಗಗಳಿಗೆ ತುತ್ತಾಗುತ್ತದೆ.
6)ವಿವಿಧ ಬೆಳೆ/ಅಂತರ ಬೆಳೆ ಪದ್ದತಿಗಳ ಪ್ರಾತ್ಯಕ್ಷಿಕೆಗಳು:
ವಿವಿಧ ಬೆಳೆಗಳನ್ನು ಸಹ ನೀವು ನೋಡಬಹುದು ಹಾಗೂ ಅಂತರ ಬೆಳೆ ಪದ್ಧತಿಗಳನ್ನು ಪ್ರತ್ಯಕ್ಷಿಕೆ ಇರುತ್ತದೆ ಮತ್ತು ಯಾವ ರೀತಿಯಾಗಿ ಮಾಡಬೇಕು ಎಲ್ಲವು ವಿವರವಾಗಿ ತೋರಿಸಲಾಗಿರುತ್ತದೆ.
7)ಸಾವಯವ ಕೃಷಿ/ನೈಸರ್ಗಿಕ ಕೃಷಿ ಪ್ರಾತ್ಯಕ್ಷಿಕೆಗಳು:
ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ತುಂಬಾ ಆಧುನಿಕ ದಿನಗಳಲ್ಲಿ ಹೆಚ್ಚಿಗೆ ಮಹತ್ವ ನೀಡಬೇಕಾಗುತ್ತದೆ ರಾಸಾಯನಿಕ ಬಳಕೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಈಗಾಗಲೇ ಭೂಮಿ ಹಾಳಾಗಿದೆ ಅದಕ್ಕೆ ನಾವು ಸಾವಯುವ ಅಥವಾ ನೈಸರ್ಗಿಕ ಕೃಷಿ ಮೂಲಕ ಮತ್ತೆ ಮರುಜೀವ ಕೊಡುವ ಕೆಲಸ ತಾವೆಲ್ಲರೂ ಮಾಡಬೇಕಾಗಿದೆ ಅದಕ್ಕೆ ಆದ ಈ ವರ್ಷದಲ್ಲಿ ಹೊಸದಾದ ತಂತ್ರಜ್ಞಾನಗಳನ್ನು ರೈತರಿಗೆ ತೋರಿಸಲಾಗುವುದು.
8)ತೊಗರಿ ಆಧಾರಿತ ಬೇಸಾಯ ಪದ್ದತಿ:
ಬಿಜಾಪುರ ಜಿಲ್ಲೆಯಲ್ಲಿ ಮತ್ತು ಸುತ್ತಮುತ್ತಲಿನ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ತೊಗರಿ ತುಂಬಾ ಪ್ರಮುಖವಾದ ಬೆಳೆ ಸಾಕಷ್ಟು ನೂರು ವರ್ಷಗಳಿಂದ ಸಹ ರೈತರು ತೊಗರಿ ಬೆಳೆಯನ್ನು ತಮ್ಮ ಜೀವನ ಆಧಾರವಾಗಿ ಬೆಳೆದುಕೊಂಡು ಬಂದಿದ್ದಾರೆ ಹೀಗಾಗಿ ಅದರಲ್ಲಿ ಮತ್ತೆ ಸುಧಾರಿತ ಬೇಸಾಯ ಕ್ರಮಗಳನ್ನು ರೈತರಿಗೆ ಮಾಹಿತಿ ನೀಡಲಾಗುತ್ತದೆ.
9)ಹಿಂಗಾರಿ ಜೋಳದಲ್ಲಿ ವಿವಿಧ ತಳಿಗಳು, ಕೀಟ, ರೋಗ ಮತ್ತು ಬರ ನಿರ್ವಹಣಾ ತಂತ್ರಜ್ಞಾನಗಳು:
ಜೋಳ ಕೂಡ ಹಿಂಗಾರು ಬೆಳೆಯಲ್ಲಿ ತುಂಬಾ ಪ್ರಮುಖವಾದ ಬೆಳೆ ಮತ್ತು ಇದರಲ್ಲಿ ನಮ್ಮ ಕೃಷಿ ಮಹಾವಿದ್ಯಾಲಯ ವಿಜಯಪುರ ಸಂಶೋಧನಾ ಕೇಂದ್ರದಿಂದ ಬಿಡುಗಡೆಯಾಗಿರ್ತಕ್ಕಂತ ವಿವಿಧ ತಳಿಗಳು ಕೀಟ ಮತ್ತು ರೋಗ ಮತ್ತು ಅದರಲ್ಲಿ ನೀರು ಕಡಿಮೆ ಬಿದ್ದರೆ ಹೊಸದಾಗಿ ಬಂದಿರುವ ತಂತ್ರಜ್ಞಾನಗಳನ್ನು ವಿವರವಾಗಿ ಹೇಳಲಾಗುವುದು.
10)ಕಡಲೆಯ ಹೊಸ ತಳಿಗಳು:
ಕಡಲೆ ಬೆಳೆ ಸಿಂಗಾರು ಬೆಳೆಯ ಪ್ರಮುಖ ಬೆಳೆಯಾಗಿದ್ದು ಈಗಾಗಲೇ ಸಾಕಷ್ಟು ರೈತರು ತಮ್ಮ ಜಮೀನುಗಳಲ್ಲಿ ಹಾಕಿರುತ್ತೀರಿ ತೊಗರಿಯಲ್ಲಿ ಈಗಾಗಲೇ ನಮಗೆ ಗೊತ್ತಿರುವ ಹಾಗೆ ಹೆಚ್ಚು ಇಳುವರಿ ನೀಡಬಲ್ಲ ತಳಿಗಳು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಹೀಗಾಗಿ ಹೊಸ ತಳಿಗಳನ್ನು ಮತ್ತೆ ಸಂಶೋಧನೆ ಮಾಡಲಾಗಿದೆ ಈ ತಳಿಗಳನ್ನು ನೀವು ನೋಡಿ ತುಂಬಾ ಇಳುವರಿ ಬರುವ ತಳಿಗಳನ್ನು ಬಿತ್ತನೆ ಮಾಡಬಹುದು.
11)ಅಜವಾನ ಕೃಷಿ:
ಅಜ್ವಾನ್ ಕೃಷಿ ರೈತರ ಗಮನ ಸೆಳೆಯುತ್ತಿರುವ ಕೃಷಿ ಈ ಬೆಳೆ ಆಗಿದೆ ಮತ್ತು ಕಡಿಮೆ ನೀರು ಇರುವ ಪ್ರದೇಶದಲ್ಲಿ ಕೇವಲ ತಂಪು ನೆಲ ಹೊಂದಿರುವ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ, ಮತ್ತು ಇದರಲ್ಲಿ ಹೊಸದಾಗಿ ಇನ್ನೂ ರೈತರು ಬಹಳಷ್ಟು ಇದರ ಬಗ್ಗೆ ಮಾಹಿತಿ ತಿಳಿದುಕೊಂಡಿಲ್ಲ ರೈತರಿಗೆ ಸಾಕಷ್ಟು ಅಜ್ವಾನ್ ಕೃಷಿ ಬೆಳೆ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
12)ಮಳೆ ಆಶ್ರಿತದಲ್ಲಿ ಚಿಕ್ಕು ಬೇಸಾಯ: ಮಳೆ ಆಶ್ರಿತ ಚಿಕ್ಕು ಬೇಸಾಯ ಬೆಳೆ ಕೂಡ ನಿಮಗೆ ಮಾಹಿತಿ ನೀಡಲಾಗುತ್ತದೆ.
13)ಅರೆಶುಷ್ಕ ವಲಯಕ್ಕೆ ಸೂಕ್ತವಾದ ಜೈವಿಕ ಇಂಧನ ಮರಗಳು ಹಾಗೂ ಕೃಷಿ ಅರಣ್ಯ ಪದ್ದತಿಗಳು:
ಕೇವಲ ಬೆಳೆಗಳನ್ನು ಬೆಳೆಯದೆ ಮತ್ತು ಜೈವಿಕ ಇಂಧನ ಮರಗಳು ಹಾಗೂ ಕೃಷಿ ಅರಣ್ಯ ಪ್ರದೇಶಗಳಲ್ಲಿ ವಿವಿಧ ಹಲವಾರು ರೀತಿಯ ಬಹು ವಾರ್ಷಿಕ ದೀರ್ಘಾವಧಿ ತಳಿಯ ಮರಗಳನ್ನು ಬೆಳೆಯುವುದರಿಂದ 10 ವರ್ಷಗಳ ನಂತರ ಕೈಯಾರೆ ಒಂದೇ ದಿನದಲ್ಲಿ ಹಣ ಸಂಪಾದನೆ ಮಾಡುವ ಅವಕಾಶವನ್ನು ರೈತರು ತಿಳಿದುಕೊಳ್ಳಬಹುದು.
14)ಕೃಷಿ ಹೊಂಡದಿಂದ ಸಂದಿಗ್ಧ ಹಂತದಲ್ಲಿ ನೀರು ನಿರ್ವಹಣೆ
15)ಫಲ / ಪುಷ್ಪ ಪ್ರದರ್ಶನ.
Pl arrange free vehicles for ryoths to attend Krishi mela. It is helpful