ಮಳೆ ಬಗ್ಗೆ ಪ್ರತಿಯೊಬ್ಬ ರೈತರಿಗೂ ತಿಳಿದುಕೊಳ್ಳುವ ಶಕ್ತಿ ತುಂಬಾ ಇರುತ್ತದೆ ಮಳೆಗಳು ತುಂಬಾ ಮುಖ್ಯ ಅದ್ರಲ್ಲಿಯೂ ರೈತರು ಯಾವುದೇ ಬೆಳೆ ಬೆಳೆಯಬೇಕಾದರೆ ಅದಕ್ಕೆ ತಕ್ಕಹಾಗೆ ಅವಮಾನ ಅಥವಾ ಮಳೆ ಮುನ್ಸೂಚನೆ ತುಂಬಾ ಅನಿವಾರ್ಯ ಮತ್ತು ಮಳೆ ಇಲ್ಲದಿದ್ದರೆ ರೈತ ಬೆಳೆ ತೆಗೆಯುವುದು ಕಷ್ಟವಾಗುತ್ತದೆ ನೀರಿನ ಕೊರತೆಯಿಂದಾಗಿ ಬೆಳೆಗಳು ಸರಿಯಾಗಿ ಬರುವುದಿಲ್ಲ ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಳೆ ನಕ್ಷತ್ರ ಮತ್ತು ಉತ್ತಮ ಮಳೆ ಸಾಧಾರಣ ಮಳೆ ಯಾವುದು ಎಂದು ನಾವು ತಿಳಿದುಕೊಳ್ಳೋಣ ಬನ್ನಿ!
1)ಅಶ್ವಿನಿ ಮಳೆ ನಕ್ಷತ್ರ :
ಈ ಮಳೆಯು ಏಪ್ರಿಲ್ ತಿಂಗಳ 13ನೇ ತಾರೀಖಿನಿಂದ 27ನೇ ತಾರೀಖಿನವರೆಗೆ ಇರುತ್ತದೆ ಮತ್ತು ಈ ಮಳೆಯು ಕಡಿಮೆ ಆಗಲಿದ್ದು ಕೆಲವೊಂದು ಪ್ರದೇಶಗಳಲ್ಲಿ ದಿನಾಂಕ ೧೪ರಿಂದ ಅಂದರೆ ಏಪ್ರಿಲ್ ತಿಂಗಳಲ್ಲಿ 14ನೇ ತಾರೀಖಿನಿಂದ ಒಂದು ವಾರಗಳ ಕಾಲ ಹೆಚ್ಚು ಮಳೆ ಆಗುವ ಸಂಭವನತೆ ಇರಲಿದೆ.
2) ಭರಣಿ ಮಳೆ ನಕ್ಷತ್ರ:
ಈ ಮಳೆಯು ಏಪ್ರಿಲ್ 27ರಿಂದ ಮೇ 11ನೇ ತಾರೀಖಿನವರೆಗೆ ಮಳೆ ಇರುತ್ತದೆ. ಈ ಮಳೆಯು ಆನೆಯ ವಾಹನದ ಮೇಲೆ ಇರಲಿದೆ, ಮತ್ತು ಸಾಧಾರಣ ಮಳೆ ಆಗಲಿದೆ ಕೊನೆಯ ವಾರಗಳಲ್ಲಿ ಹೆಚ್ಚು ಅಲ್ಲಲ್ಲಿ ಮಳೆ ಆಗುವ ಸಂಭವನತೆ ಇದೆ.
3) ಕೃತಿಕ ಮಳೆ ನಕ್ಷತ್ರ:
ಈ ಮಳೆಯು ಮೇ 12ನೇ ತಾರೀಖಿನಿಂದ 25 ಮೇ ರವರಿಗೆ ಇರಲಿದೆ ಮತ್ತು ಈ ಮಳೆಯ ವಾಹನ ಟಗರು ಮೇಲಿದೆ. ಮತ್ತು ಈ ವರ್ಷ ಈ ಮಳೆ ಸ್ವಲ್ಪ ಚುರುಕಾಗಲಿದೆ. ದಿನಾಂಕ 12 ರಿಂದ 20 ರವರೆಗೆ ಸ್ವಲ್ಪ ಹೆಚ್ಚಾಗಿ ಮಳೆ ಆಗುವ ಸಾಧ್ಯತೆ ಇರುತ್ತದೆ.
4) ರೋಹಿಣಿ ಮಳೆ ನಕ್ಷತ್ರ :
ಮೇ 25ನೇ ತಾರೀಖಿನಿಂದ ಜೂನ್ 8ನೇ ತಾರೀಖಿನವರೆಗೆ ರೋಹಿಣಿ ಮಳೆ ನಕ್ಷತ್ರವು ಉತ್ತಮ ವಾತಾವರಣವಿದ್ದು ಮತ್ತು ಹೆಚ್ಚು ಮಳೆ ಸುರಿಸಲಿದೆ ಕರ್ನಾಟಕದ ಬಹು ಭಾಗಗಳಲ್ಲಿ ಮಳೆ ಆಗಲಿದೆ.
5) ಮೃಗಶಿರ ಮಳೆ ನಕ್ಷತ್ರ :
ಈ ಮೃಗಶಿರ ಮಳೆ ನಕ್ಷತ್ರವು ಜೂನ್ 8ನೇ ತಾರೀಖಿನಿಂದ 22ನೇ ತಾರೀಕಿನವರೆಗೆ ಇರಲಿದ್ದು ಮತ್ತು ನರಿ ವಾಹನದ ಮೇಲೆ ಈ ಮಳೆ ಇರಲಿದೆ ಹಾಗೂ ಮಧ್ಯಮದ ಮಳೆ ಸುರಿಯಲಿದೆ. 8ನೇ ತಾರೀಖಿನಿಂದ 20ನೇ ತಾರೀಖಿನವರೆಗೆ ಅಲ್ಲಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಚೆನ್ನಾಗಿ ಮಳೆ ಆಗಲಿದೆ.
6) ಆರಿದ್ರ ಮಳೆ ನಕ್ಷತ್ರ:
ಈ ಮಳೆ ನಕ್ಷತ್ರವು 22ನೇ ಜೂನ್ ತಿಂಗಳಿಂದ ಆರನೆಯ ಜುಲೈ ತಿಂಗಳಿಗೆ ಮುಕ್ತಾಯಗೊಳ್ಳುತ್ತದೆ. ಇಲಿವಾಹನ ಮೇಲೆ ಮಳೆ ಇದ್ದು , ಮೂರು ಮತ್ತು ನಾಲ್ಕನೇ ವಾರದಲ್ಲಿ ವಾಯುವ್ಯ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಲಿದೆ.
7) ಪುನರ್ವಸು ಮಳೆ ನಕ್ಷತ್ರ :
ಪುನರ್ವಸು ಮಳೆ ನಕ್ಷತ್ರವು 6ನೇ ಜುಲೈ ತಿಂಗಳಿಂದ 20ನೇ ತಾರೀಖಿನವರೆಗೆ ಇರಲಿದ್ದು, ಕುದುರೆ ವಾಹನವನ್ನು ಹೊಂದಿದೆ ಮತ್ತು ಮಳೆ ಕುದುರೆ ಓಡುವ ರೀತಿಯಲ್ಲಿ ಓಡುತ್ತಾ ಹೋಗುತ್ತದೆ. ಚಂಡಮಾರುತಗಳು ಮತ್ತು ಅತಿವೃಷ್ಟಿಯನ್ನು ಉತ್ತರ ಭಾರತದ ಭಾಗಗಳಲ್ಲಿ ಕಾಣಬಹುದು.
8) ಪುಷ್ಯ ಮಳೆ ನಕ್ಷತ್ರ:
ಪುಷ್ಯ ಮಳೆ ನಕ್ಷತ್ರವು 20 ಜುಲೈನಿಂದ ಎರಡು ಅಗಸ್ಟರವರೆಗೆ ಇರಲಿದೆ ಮತ್ತು ಈ ಮಳೆಯ ವಾಹನವು ನವಿಲು ಆಗಿರಲಿದೆ. ಒಂದು ಮತ್ತು ಎರಡನೇ ವಾರದಲ್ಲಿ ಅಲ್ಲಲ್ಲಿ ಮಳೆಯಾಗಬಹುದು ಮತ್ತು ಮೂರು ಮತ್ತು ನಾಲ್ಕನೇ ವಾರದಲ್ಲಿ ಕಡಿಮೆ ಮಳೆ ಬಿಟ್ಟು ಬಿಟ್ಟು ಭಾಗಗಳಲ್ಲಿ ಬರಬಹುದು.
9) ಅಸಲೇಶ ಮಳೆ ನಕ್ಷತ್ರ :
ಮಳೆಯೂ ಆಗಸ್ಟ್ 2 ರಿಂದ ಅಗಸ್ಟ್ 16ರವರೆಗೆ ಕತ್ತೆ ವಾಹನದ ಮೇಲೆ ಇರಲಿದೆ. ತುಂಬಾ ಉತ್ತಮ ಮಳೆ ವಾಗಲಿದ್ದು ಮತ್ತು ಗಾಳಿ ಸಹಿತ ಮಳೆ ಬರಲಿದೆ ಹಾನಿಯನ್ನು ಸಹ ಉಂಟುಮಾಡುವ ಸಂಭವವಿದೆ ಮತ್ತು ಎಲ್ಲಾ ಕಡೆಗೂ ಮಳೆ ಆಗಲಿದೆ.
10)ಮಾಘ ಮಳೆ ನಕ್ಷತ್ರ :
ಈ ಮಳೆ ನಕ್ಷತ್ರವು ಆಗಸ್ಟ್ 16ನೇ ತಾರೀಖಿನಿಂದ 30ರವರೆಗೆ ಇರಲಿದೆ ಕಪ್ಪೆ ವಾಹನದ ಮೇಲೆ ಇರುವುದರಿಂದ ಸಾಕಷ್ಟು ಚೆನ್ನಾಗಿ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯೊಂದಿಗೆ ಉತ್ತರ ಭಾರತದ ಭಾಗಗಳಲ್ಲಿ ಪ್ರವಾಹ ಭೀತಿ ಎದುರಾಗಬಹುದು.
11) ಪೂರ್ವ ಮಳೆಯ ನಕ್ಷತ್ರ :
ಪೂರ್ವ ಮಳೆಯ ನಕ್ಷತ್ರವು 30 ಆಗಸ್ಟ್ ನಿಂದ 13 ಸೆಪ್ಟೆಂಬರ್ ವರೆಗೆ ಇರಲಿದೆ ಮತ್ತು ಈ ಮಳೆಯ ವಾಹನವು ಎಮ್ಮೆ ಮೇಲೆ ಇರುವುದರಿಂದ. ಸಾಧಾರಣ ಮಳೆಯಿಂದ ಜಿಡಿಜಿಡಿ ಮಳೆ ಆಗುವ ಸಾಧ್ಯತೆ ಇದೆ.
12) ಉತ್ತರ ಮಳೆ ನಕ್ಷತ್ರ :
ಈ ಮಳೆಯು ಸೆಪ್ಟೆಂಬರ್ 13ನೇ ತಾರೀಖಿನಿಂದ 27 ಸೆಪ್ಟೆಂಬರ್ ವರೆಗೆ ಇರಲಿದ್ದು ಮತ್ತು ಈ ಮಳೆಯ ವಾಹನವು ನರಿ ಆಗಿದೆ ಹಾಗೂ ಮಧ್ಯಮ ಮಳೆ ಸುರಿಸುವ ಗುಣಲಕ್ಷಣವನ್ನು ಈ ಉತ್ತರ ಮಳೆ ನಕ್ಷತ್ರವು ಹೊಂದಿದೆ. 14ರಿಂದ 20ರವರೆಗೆ ಜಾಸ್ತಿ ಮಳೆ ಆಗುವ ಸಾಧ್ಯತೆ ಇದೆ.
13) ಹಸ್ತ ಮಳೆ ನಕ್ಷತ್ರ :
ಹಸ್ತ ಮಳೆ ನಕ್ಷತ್ರವು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10 ನೇ ತಾರೀಖಿನವರೆಗೆ ಇರಲಿದ್ದು ಈ ಮಳೆಯೂ ಕೂಡ ನವಿಲುವ ಹಣದ ಮೇಲೆ ಮುಂಗಾರು ಮಳೆ ದುರ್ಬಲವಾಗಿರುತ್ತವೆ ಮತ್ತು ಅಲ್ಲಲ್ಲಿ ಮೋಡ ಕವಿದ ವಾತಾವರಣ ಕರಾವಳಿ ಪ್ರದೇಶಗಳಲ್ಲಿ ಕಾಣಬಹುದು.
14)ಚಿತ್ತ ಮಳೆ ನಕ್ಷತ್ರ :
ಚಿತ್ತ ಮಳೆ ನಕ್ಷತ್ರವು 10 ಅಕ್ಟೋಬರ್ ನಿಂದ 24 ಅಕ್ಟೋಬರ್ ಅವರಿಗೆ ಇರಲಿದ್ದು ಮತ್ತು ಈ ಮಳೆಯ ವಾಹನವು ಆನೆ ಆಗಿರಲಿದ್ದು. ಕರ್ನಾಟಕದ ಅತ್ಯಂತ ಉತ್ತಮ ಮಳೆ ಯಾಗುವ ಸೂಚನೆಯಿದ್ದು 11 ರಿಂದ 24 ನೇ ತಾರೀಖಿನವರೆಗೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ.
15) ಸ್ವಾತಿ ಮಳೆ ನಕ್ಷತ್ರ :
ಈ ಮಳೆ ನಕ್ಷತ್ರವು 24 ಅಕ್ಟೋಬರ್ ತಾರೀಕಿನಿಂದ 6 ನವೆಂಬರ್ ವರೆಗೆ ಇರಲಿದೆ ಮತ್ತು ಈ ಮಳೆಯೂ ಕಪ್ಪೆ ವಾಹನದ ಮೇಲೆ ಬರಲಿದ್ದು ತುಂಬಾ ಚೆನ್ನಾಗಿ ಮಳೆ ಆಗುವ ಸಾಧ್ಯತೆ ಇದೆ ಹಾಗೂ ಮೋದಕವಿದ ವಾತಾವರಣವಿರಲಿದ್ದು ಮತ್ತು ತಂಡಿ ಕೂಡ ಜಾಸ್ತಿ ಇರಲಿದೆ. 24 ರಿಂದ ಐದನೇ ತಾರೀಖಿನವರೆಗೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.
One thought on “ಮಳೆ ನಕ್ಷತ್ರಗಳು 2025 ಸಂಪೂರ್ಣ ವಿವರ |Male Nakshatragalu 2025”